Follow Us On

WhatsApp Group
Focus News
Trending

ಕೆಂಡ ಮಹಾಸತಿ ದೇವರ ವರ್ಧಂತಿ ಉತ್ಸವ ಸಂಪನ್ನ

ಹೊನ್ನಾವರ; ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರಿಂದ ಪ್ರತಿಷ್ಠಾಪಿಸಲ್ಪಟ್ಟ ತಾಲೂಕಿನ ಮಂಕಿ ದೇವರಗದ್ದೆಯ ಕೊಂಕಣಿ ಖಾರ್ವಿ ಸಮಾಜದ ಶ್ರೀ ಕೆಂಡ ಮಹಾಸತಿ ದೇವಸ್ಥಾನದಲ್ಲಿ 11ನೇ ವರ್ಷದ ವರ್ಧಂತಿ ಉತ್ಸವ ವಿಜ್ರಂಭಣೆಯಿoದ ನಡೆಯಿತು.

ವರ್ಧಂತಿ ಉತ್ಸವದ ಪ್ರಯುಕ್ತ ಕಲಸ ಪೂಜೆ, ನವಗ್ರಹ ಹವನ, ಮಹಾಪೂಜೆ ಅನ್ನಸಂತರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕೆಂಡ ಮಹಾಸತಿ ದೇವಸ್ಥಾನದ ಅಡಳಿತ ಮಂಡಳಿಯವರು, ಕೊoಕಣಿ ಖಾರ್ವಿ ಸಮಾಜದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Back to top button