ಅಂಕೋಲಾ: ಐಷಾರಾಮಿ ಕಾರಿನಲ್ಲಿ ಬಂದ ವ್ಯಕ್ತಿಗಳೀರ್ವರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ಸಂಶಯಾಸ್ಪದವಾಗಿ ಓಡಾಡಿಕೊಂಡಿದ್ದಾಗ, ಮೋಲೀಸರ ಬಲೆಗೆ ಬಿದ್ದ ಘಟನೆ ಹಲವರ ಕುತೂಹಲಕ್ಕೆ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ನಾನಾ ರೀತಿಯಲ್ಲಿ ಚರ್ಚಿಸ ತೊಡಗಿದ್ದು ಆರೋಪಿತರ ಅಸಲಿಯತ್ತು ಬಯಲಾಗಬೇಕಿದೆ ಎಂಬ ಮಾತು ಕೇಳಿ ಬಂದಿದೆ.
ಆರೋಪಿತರು ಎಲ್ಲಂದಲೋ ಕಳ್ಳತನ ಮಾಡಿ ತಂದಿರುವ ವಾಹನದ ವೀಲ್ ತೆಗೆಯುವ ಯಂತ್ರ ಮತ್ತು ಮೊಬೈಲ್ ಪೋನುಗಳೊಂದಿಗೆ ಅಂಕೋಲಾ ಪೊಲೀಸರಿಗೆ ರಾಷ್ಟ್ರೀಯ ಹೆದ್ದಾರಿ 63 ರಾಮನಗುಳಿ ಬಳಿ ಸಿಕ್ಕಿ ಬಿದ್ದಿದ್ದಾರೆ ಎನ್ನಲಾದ ಈರ್ವರು ಅಂತರ್ ರಾಜ್ಯ ಕಳ್ಳರು ಎನ್ನಲಾಗಿದೆ.ಮಹಾರಾಷ್ಟ್ರದ ಠಾಣಾ ನಿವಾಸಿ ಮಹಮ್ಮದ ಸಲೀಂ ಮಹಮ್ಮದ ಹನೀಫ ಶೇಖ್ (30) ಮತ್ತು ಉತ್ತರ ಪ್ರದೇಶ ಬಲರಾಮಪುರ ನಿವಾಸಿ ನಮ್ರೋಜ್ ಖಾನ್ ಮಹಮ್ಮದ್ ಖಾನ್ (32) ಬಂಧಿತ ಆರೋಪಿಗಳು .
ಇವರಿಂದ ಕಲಘಟಗಿ ದಾಸ್ತಿನಕೊಪ್ಪದಲ್ಲಿ ಕಳುವು ಮಾಡಿದ ಸುಮಾರು 5 ಸಾವಿರ ಮೌಲ್ಯದ ವಾಹನಗಳ ವೀಲ್ ತೆಗೆಯುವ ಯಂತ್ರ ಮತ್ತು ಬೇರೆ ಬೇರೆ ಭಾಗಗಳಲ್ಲಿ ಕಳುವು ಮಾಡಿದ 13 ಸಾವಿರ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 6 ಮೊಬೈಲ್ ಪೋನುಗಳು ಮತ್ತು 1.10 ಲಕ್ಷ ಮೌಲ್ಯದ ಟಾಟಾ ಇಂಡಿಗೋ ಕಾರು ವಶಪಡಿಸಿಕೊಳ್ಳಲಾಗಿದೆ.
ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಶಯಾಸ್ಪದವಾಗಿ ಸಿ.ಎಚ್ 01 ಎ.ಸಿ 7798 ನೋಂದಣಿ ಸಂಖ್ಯೆಯ ಕಾರಿನಲ್ಲಿ ಇದ್ದ ವ್ಯಕ್ತಿಗಳನ್ನು ಅಂಕೋಲಾ ಪಿ.ಎಸ್. ಐ ಮಹಾಂತೇಶ ಮತ್ತು ಸಿಬ್ಬಂದಿಗಳು ತಡೆದು ವಿಚಾರಣೆ ನಡೆಸಿದಾಗ ಕಾರಿನಲ್ಲಿ ಕಳ್ಳತನ ಮಾಡಿದ ವಸ್ತುಗಳು ಇರುವುದು ಬೆಳಕಿಗೆ ಬಂದಿದೆ. ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರ ನೇತೃತ್ವದಲ್ಲಿ ಬಂಧಿತ ವ್ಯಕ್ತಿಗಳ ಕುರಿತಂತೆ ಹೆಚ್ಚಿನ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.