Follow Us On

WhatsApp Group
Important
Trending

ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ ವಧುವಿನ ಕಡೆಯ ಟೆಂಪೋ ಪಲ್ಟಿ: 20 ಮಂದಿಗೆ ಗಾಯ

ಕುಮಟಾ : ಮದುವೆ ಟೆಂಪೋವೊಂದು ಕಂದಕಕ್ಕೆ ಉರುಳಿ 20 ಮಂದಿಗೆ ಗಾಯವಾದ ಘಟನೆ ಅಘನಾಶಿನಿಯ‌ ಮಾಸ್ತಿಕಟ್ಟೆ ಘಟ್ಟದ ಬಳಿ ನಡೆದಿದೆ. ಇವರಲ್ಲಿ ಏಳೆಂಟು ಮಂದಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟ್ಟ ಏರುತ್ತಿದ್ದಾಗ ಹಿಮ್ಮುಖವಾಗಿ ಚಲಿಸಿ, ಟೆಂಪೋ ಪಲ್ಟಿಯಾಗಿದ್ದು, ರಸ್ತೆ ಪಕ್ಕದ ಕಂದಕಕ್ಕೆ ಉರುಳಿ, ಈ ಅವಾಂತರ ಸಂಭವಿಸಿದೆ. ಕುಮಟಾದಲ್ಲಿ ನಡೆದ ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ ವಧುವಿನ ಕಡೆಯ ಟೆಂಪೋ ಪಲ್ಟಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ವಿಸ್ಮಯ ನ್ಯೂಸ್ ಕುಮಟಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button