Focus News
Trending

ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ಸ್ಥಳೀಯ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2021-2022 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ಕಾರವಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಹರೀಶ ಎಲ್. ಗಾಂವಕರರವರು ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿ ಸಂಘವನ್ನು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ಉದ್ಘಾಟಿಸಿ, ಶಿಕ್ಷಕನಿಂದಲೇ ಈ ಸಮಾಜದಲ್ಲಿ ಬದಲಾವಣೆ ಸಾಧ್ಯ. ಶಿಕ್ಷಕ ಕಾರ್ಯ ನಿರ್ವಹಿಸುವಾಗ ಬದ್ಧತೆ, ತ್ಯಾಗ, ಮನೋಭಾವನೆ, ಕಠಿಣ ಶ್ರಮ ಅಗತ್ಯ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಡಾ. ಪ್ರೀತಿ ಪಿ. ಭಂಡಾರಕರ ರಚಿಸಿದ “ಭಾಷಾಶಾಸ್ತç ಮತ್ತು ಭಾಷಾ ಬೋಧನಾಶಾಸ್ತç ಹಾಗೂ ವಿಷಯಾಂತರ್ಗತವಾಗಿ ಭಾಷೆ” ಬಿ.ಇಡಿ. ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.

ಪುಸ್ತಕ ರಚನೆ ಸವಾಲಿನ ಕೆಲಸ ಹಾಗೂ ರಚನೆಯಲ್ಲಿ ಪರಿಶ್ರಮವಿರುತ್ತದೆ, ಟಿ.ಇ.ಟಿ. ಮತ್ತು ಸಿ.ಇ.ಟಿ. ತಯಾರಿಗೆ ಭಾಷಾ ಅಧ್ಯಯನ ಪುಸ್ತಕ ವಿದ್ಯಾರ್ಥಿಗಳಿಗೆ ಅನುಕೂಲಕರ ಎಂದು ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರು ಮತ್ತು ಗೌರವ ಪ್ರಾಧ್ಯಾಪಕರಾದ ಡಾ. ಉಮೇಶ ಜಿ. ಶಾಸ್ತಿç ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾರವಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಹರೀಶ ಎಲ್. ಗಾಂವಕರ ಮತ್ತು ರಂಗನಿರ್ದೇಶಕರಾದ ಡಾ. ಶ್ರೀಪಾದ ಜಿ. ಭಟ್ಟರವರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿ ಕೇಂದ್ರಿತ ಚಿಂತನಾಕ್ರಮ ಶಿಕ್ಷಕರಲ್ಲಿ ಇರಬೇಕು ಎಂದು ಡಾ. ಶ್ರೀಪಾದ ಜಿ. ಭಟ್ಟ ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳು ಮತ್ತು ಕುಮಟಾದ ಕೆನರಾ ಕಾಲೇಜ್ ಸೊಸೈಟಿಯ ಕಾರ್ಯದರ್ಶಿಯಾದ ಶ್ರೀ. ಸುಧಾಕರ ವಿ. ನಾಯಕ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಗತ್ಯ, ಪುಸ್ತಕವನ್ನು ರಚಿಸಿದ್ದಕ್ಕೆ ಡಾ. ಪ್ರೀತಿ ಪಿ. ಭಂಡಾರಕರ ರವರನ್ನು ಅಭಿನಂದಿಸಿದರು.

2019-2020 ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದವರನ್ನು ಪ್ರೊ. ಸುಬ್ರಹ್ಮಣ್ಯ ಕೆ. ಭಟ್ಟ ಪರಿಚಯಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರರವರು ಶಿಕ್ಷಣದಲ್ಲಿ ಗುಣಾತ್ಮಕತೆ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಪೃಥ್ವಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ವಿನಾಯಕ ಕೆ. ಭಟ್ಟ ಸ್ವಾಗತಿಸಿ ಮತ್ತು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ನವಲೆ ವಿದ್ಯಾರ್ಥಿ ಸಂಘದ ಕಾರ್ಯಸೂಚಿಯನ್ನು ವಾಚಿಸಿದರು. ಸಹನಾ ನಾಯ್ಕ ವಂದಿಸಿದರು. ಅಶ್ವಿನಿ ಬಾಂದೇಕರ ಮತ್ತು ಬಿಂದು ಅವಧಾನಿ ಕಾರ್ಯಕ್ರಮವನ್ನು ನಿರೂಪಿಸಿದರು.

Back to top button