Focus News
Trending

ಆರ್.ಎನ್.ಎಸ್ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ “ವಿಶ್ವಪರಿಸರ ದಿನಾಚರಣೆ” ಅಂಗವಾಗಿ –ಗಿಡನೆಡು-ಕಾರ್ಯಕ್ರಮ

ದಿನಾಂಕ 4-06-22 ಬೆಳಿಗ್ಗೆ 11 ಗಂಟೆಗೆ ಆರ್.ಎನ್.ಎಸ್ ಪಿ.ಯು ಮತ್ತು ಪ್ರಥಮ ದರ್ಜೆ ಕಾಲೇಜು ಹಾಗೂ ಎನ್.ಎಸ್.ಎಸ್ ಘಟಕ ಮುರ್ಡೆಶ್ವರದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ “ಗಿಡನೆಡು” ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರಿಸಲಾಯಿತು.
ಕಾರ್ಯಕ್ರಮವನ್ನು ಗಿಡನೆಡುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದ ಆರ್.ಎನ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ದಿನೇಶ ಗಾಂವಕರವರು ಭಾರತೀಯರು ನಾವೆಲ್ಲರೂ ವನಮಹೋತ್ಸವವನ್ನು ರಾಷ್ಟ್ರದಾದ್ಯಂತ ಆಚರಿಸಿ ವಿಶ್ವ ಜಾಗ್ರತಿ ಮೂಡಿಸುವ ಮತ್ತು ಪರಿಸರ, ಪ್ರಕ್ರತಿ ಸಮೂಹ ನಮಗೆ ಎಲ್ಲವನ್ನು ನೀಡಿದೆ, ಅದರ ರಕ್ಷಣೆಯ ಹೊಣೆ ಹೊರಬೇಕಾದದ್ದು ನಮ್ಮ ಕರ್ತವ್ಯ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆರ್.ಎನ್.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಾಧವ ಪಿ. ಮಾತಾನಾಡಿ ಪರಿಸರವನ್ನು ಮಾಲಿನ್ಯದಿಂದ ರಕ್ಷಿಸೋಣ, ಪರಿಸರ ಸಂರಕ್ಷಣೆಯೇ ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಗೆ ನಾವು ಕೊಡಬಹುದಾದ ಅಮ್ಯೂಲ ಕೊಡುಗೆ ಎಂದರು.

ಕಾರ್ಯಕ್ರಮದಲ್ಲಿ ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಸಂಜಯ ಕೆ.ಎಸ್ ಅಧ್ಯಕ್ಷತೆವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ನಮ್ಮಂತೆಯೇ ಪ್ರತಿ ಸಸ್ಯಗಳಿಗೂ ಜೀವವಿದೆ,ಗಿಡಮರಗಳ ಸಂರಕ್ಷಣೆ ಆದಾಗ ಮಾತ್ರ ನಾವು ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಹಸಿರು ಗಿಡಗಳನ್ನು ಗಣ್ಯರು ವಿತರಿಸಿದರು. ಕುಮಾರಿ.ತ್ರಿವೇಣಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿಯರಾದ ಕು.ತ್ರಿಶಾ,ಕು.ರೇಣುಕಾ,ಕು.ಕೀರ್ತಿರವರು ಪರಿಸರ ಗೀತೆ ಹಾಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಗಣೇಶ ನಾಯ್ಕ ಎಲ್ಲರಿಗೂ ವಂದಿಸಿ ಧನ್ಯವಾದ ಅರ್ಪಿಸಿದರು.

Back to top button