Important
Trending

ಮೂರು ಕಂಟೇನರ್ ವಾಹನ ಸಮೇತ 12 ಗೋವು ವಶಕ್ಕೆ: ಪೋಲಿಸರ ಕಾರ್ಯಾಚರಣೆ

ಹೊನ್ನಾವರ: ಅಧಿಕೃತವಾಗಿ ಯಾವುದೇ ಪಾಸ್ ಪರ್ಮೀಟ್ ಹೊಂದಿರದೇ ಗಾಳಿ ಬೆಳಕು ಇಲ್ಲದೇ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಮೂರು ಕಂಟೇನರ್ ವಾಹನದಲ್ಲಿ ಮೂರು ಹೋರಿಗಳು ಹಾಗು 9 ಕೋಣವನ್ನು ಸಾಗಿಸುತ್ತಿದ್ದಾಗ ಪಿಎಸೈ ಮಹಾಂತೇಶ ಹಾಗೂ ಸಿಬ್ಬಂದಿಗಳು ಅನುಮಾನಗೊಂಡು ಗೇರುಸೋಪ್ಪಾ ಮಾರ್ಗದಿಂದ ಹೊನ್ನಾವರ ಕಡೆಗೆ ಬರುತಿದ್ದ ಮೂರು ವಾಹನ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಚಿತದುರ್ಗಾದ ಚಳ್ಳಕೇರಿಯ ಮಹಮ್ಮದ್ ಜಾಫರ್, ಹಾವೇರಿಯ ಹಾನಗಲ್ ಹನುಮಂತ ಬರ್ಮಗೌಡ, ಹಾವೇರಿಯ ಹಾನಗಲ್ ಸುರೇಶ ಹನುಂಮತಪ್ಪ ಕಟ್ಟಿಗೇರ ಇವರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಭಂದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button