ಎಳನೀರು ತುಂಬಿ ಸಾಗಿಸುತ್ತಿದ್ದ ಪಿಕಪ್ ವಾಹನ ಮತ್ತು ಟಿಪ್ಪರ್ ಲಾರಿ ನಡುವೆ ಡಿಕ್ಕಿ

ಅಂಕೋಲಾ: ಬೋಲೇರೋ ಪಿಕಪ್ ವಾಹನ ಮತ್ತು ಟಿಪ್ಪರ್ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಘಟನೆ ರಾ.ಹೆ 66ರ ಅಂಕೋಲಾ ತಾಲೂಕಿನ ವಂದಿಗೆ ವ್ಯಾಪ್ತಿಯಲ್ಲಿ (ಮಹಾಮಾಯಾ ದೇವಸ್ಥಾನದ ಹೆಬ್ಬಾಗಿಲ ಎದುರು ) ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಹೊನ್ನಾವರದಿಂದ ಎಳನೀರು ತುಂಬಿ ಅಂಕೋಲಾ ಕಡೆ ಸಾಗಿಸುತ್ತಿದ್ದ ಬೊಲೇರೋ ಪಿಕ್ ಅಪ್ ವಾಹನ ಮತ್ತು ಟಿಪ್ಟರ್ ಲಾರಿಯ (ನಡುವೆ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ, ಬೊಲೆರೋ ವಾಹನದ ಮುಂಭಾಗ ಚಚ್ಚಿ ಹೋಗಿದೆ. 112 ವಾಹನ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಇಲಾಖೆ ಕಾನೂನು ಕ್ರಮ ಮುಂದುವರಿಸಿದ್ದು ,ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version