Follow Us On

WhatsApp Group
Big NewsImportant
Trending

ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ಮುಂದುವರಿದ ಬಸವರಾಜ ಹೊರಟ್ಟಿ ಗಲುವಿನ ನಾಗಾಲೋಟ: ಯಾರ್ಯಾರಿಗೆ ಎಷ್ಟು ಮತ ?

ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರು ಗೆಲವು ಸಾಧಿಸುವ ಮೂಲಕ 8ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ.

ಬಸವರಾಜ ಹೊರಟ್ಟಿ ಗಲುವಿನ ನಾಗಾಲೋಟ

ಗೆಲುವಿನ ಗುರಿಗೆ ಬೇಕಾಗಿದ್ದ ಮತಗಳನ್ನು ಸುಲಭವಾಗಿ ಪಡೆದ ಹೊರಟ್ಟಿ ಅವರು 9266 ಮತಗಳನ್ನು ಪಡೆದಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರು 4597 ಮತಗಳನ್ನು ಪಡೆದರೆ, ಜೆಡಿಎಸ್ ನ ಶ್ರೀಶೈಲ ಗಡದಿನ್ನಿ, 273 ಮತಗಳನ್ನು ಪಡೆದಿದ್ದಾರೆ.

ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಬಸವರಾಜ ಹೊರಟ್ಟಿ ಗೆಲುವಿನ ನಗು ಬೀರಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button