Important
Trending

ತೋಟದ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಮೂವರಿಂದ‌ ಮಾನಹಾನಿಗೆ ಯತ್ನ ಆರೋಪ: ಮಹಿಳೆಯಿಂದ‌ ದೂರು ದಾಖಲು

ಮೂವರು ಆರೋಪಿತರ ಮೇಲೆ ಕೇಸ್ ದಾಖಲು

ಅಂಕೋಲಾ: ಮೂವರು ವ್ಯಕ್ತಿಗಳು ತನ್ನ ಮಾನಹಾನಿಗೆ ಯತ್ನಿಸಿ, ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವಳು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಳವಳ್ಳಿಯ (45) ರ ಮಹಿಳೆ, ತಾನು ಬೇರೆಯವರ ಮನೆಯ ತೋಟದ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಳವಳ್ಳಿ ಸಭಾ ಭವನದ ಬಳಿ ಅಡ್ಡಗಟ್ಟಿದ ಮೂವರು ಆರೋಪಿತರು, ತನ್ನ ಮೈ ಮೇಲೆ ಕೈ ಹಾಕಿ,ದೈಹಿಕ ಮಾನಹಾನಿಗೆ ಯತ್ನ ನಡೆಸಿದ್ದಲ್ಲದೆ, ಬಿಗಿದಪ್ಪಿ ಗಟ್ಟಿಯಾಗಿ ಹಿಡಿದು ದೈಹಿಕ ಹಲ್ಲೆ ಸಹ ನಡೆಸಿದ್ದಾರೆ ಎಂದು ನಡೆದ ಘಟನೆಯ ಕುರಿತು ಸಂತ್ರಸ್ತ ಮಹಿಳೆ ಪೊಲೀಸ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಈ ಪ್ರಕರಣದ ಕುರಿತು ಸ್ಥಳೀಯ ವಲಯದಲ್ಲಿ ನಾನಾ -ರೀತಿಯ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದ್ದು, ಪ್ರಕರಣ ಯಾವೆಲ್ಲಾ ರೀತಿಯ ತಿರುವು ಪಡೆಯಬಹುದೇ? ಎಂದು ಸ್ಥಳೀಯ ಕೆಲವರು ತಮ್ಮ – ತಮ್ಮಲ್ಲಿಯೇ ಮಾತನಾಡಿಕೊಂಡಂತಿದೆ. ಪೊಲೀಸ್ ತನಿಖೆಯಿಂದ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button