Join Our

WhatsApp Group
Big NewsImportant
Trending

ನಾಯಿ ತಪ್ಪಿಸಲು ಹೋಗಿ ಬೈಕ್ ಪಲ್ಟಿ; ಜೀವ ಉಳಿಸಿದ ಹೆಲ್ಮೆಟ್! ಈ ಘಟನೆ ನೋಡಿ

ಕಾರವಾರ: ನಾಯಿ ತಪ್ಪಿಸಲು ಬ್ರೇಕ್ ಹಾಕಿದ್ದ ಸವಾರನೋರ್ವ ಬೈಕ್ ನಿಂದು ಬಿದ್ದು ಗಾಯಗೊಂಡಿರುವ ಘಟನೆ ತಾಲೂಕಿನ ಚಿತ್ತಾಕುಲಾ ಗ್ರಾಮದಲ್ಲಿ ನಡೆದಿದೆ.

ಚಿತ್ತಾಕುಲ ಬಳಿ ಸಣ್ಣದಾಗಿ ಸುರಿಯುತ್ತಿದ್ದ ಮಳೆ ವೇಳೆ ಬೈಕ್ ಮೂಲಕ ತೆರಳುತ್ತಿದ್ದ ಸವಾರನೋರ್ವ ಏಕಾಏಕಿ ಅಡ್ಡಬರಲು ಮುಂದಾದ ನಾಯಿ ತಪ್ಪಿಸಲು ಬೈಕ್ ಗೆ ಬ್ರೇಕ್ ಹಾಕಿದ್ದು, ಮಳೆ ನೀರಿನಲಿ ಬೈಕ್ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಈ ವೇಳೆ ಬೈಕ್ ಹಾಗೂ ಸವಾರ ರಸ್ತೆಯಲ್ಲಿ ಬಿದ್ದಿದ್ದು ಅದೃಷ್ಟವಸಾತ್ ಎದುರುಗಡೆಯಿಂದ ಬರುತ್ತಿದ್ದ ವಾಹನವೊಂದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಹೆಲ್ಮೆಟ್ ಧರಿಸಿದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಅಕ್ಕಪಕ್ಕದ ಅಂಗಡಿಯವರು ಎತ್ತಲು ಬಂದಾಗ ತಾನಾಗಿಯೇ ಎದ್ದು ಸ್ವಲ್ಪ ಹೊತ್ತು ಸುಧಾರಿಸಿಕೊಂಡು ತೆರಳಿದ್ದಾನೆ. ಆದರೆ ಈ ದೃಶ್ಯ ಅಲ್ಲೆ ಹತ್ತಿರದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button