Important
Trending

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಾಗವಾನಿ ಕಟ್ಟಿಗೆ ವಶಕ್ಕೆ: ಓರ್ವನ ಬಂಧನ: ತಪ್ಪಿಸಿಕೊಂಡ ಮೂವರಿಗಾಗಿ ಶೋಧ

ಮುಂಡಗೋಡ: ಅರಣ್ಯದಲ್ಲಿ 2 ಮರಗಳನ್ನು ಕತ್ತರಿಸಿ ಸಾಗಾಟ ಮಾಡಲು ಸಂಗ್ರಹಿಸಿಟ್ಟಿದ್ದ ಸಾಗವಾನಿ ಕಟ್ಟಿಗೆ ವಶಪಡಿಸಿಕೊಂಡ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಮಂಜುನಾಥ ಬಸಾಪುರ ಎಂದು ಹೇಳಲಾಗಿದೆ. ಬಸವರಾಜ ವಡ್ಡರ, ಮಹೇಶ ಸುಣಗಾರ ಹಾಗೂ ಮಹೇಶ ಮಹರಾಜಪೇಟ ತಲೆ ಮರೆಸಿಕೊಂಡಿರುವ ಆರೋಪಿಗಳು ಎಂದು ತಿಳಿದುಬಂದಿದೆ.

ಇಲ್ಲಿ ಹನಮಾಪೂರ ಅರಣ್ಯದಲ್ಲಿ ಇದೇ ಅರಣ್ಯಗಳ್ಳರು ಬೃಹತ್ ಎರಡು ಸಾಗವಾನಿ ಮರಗಳನ್ನು ಕತ್ತರಿಸಿಕೊಂಡು ಸಾಗಾಟ ಮಾಡಲು ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಲಾಗಿದೆ. ತಪ್ಪಿಸಿಕೊಂಡವರಿಗಾಗಿ ಶೋಧ ಮುಂದುವರಿದಿದೆ. ಎಸಿಎಫ್ ಶ್ರೀಶೈಲ್ ವಾಲಿ ಹಾಗೂ ವಲಯ ಅರಣ್ಯಾಧಿಕಾರಿ ಮಾರ್ಗ ದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button