ಶಿರಸಿ: ಅಕ್ರಮವಾಗಿ ಗೋವಾ ಮದ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದಾಗ ಶಿರಸಿ ತಾಲೂಕಿಮ ಬೈರುಂಬೆಯ ಬಳಿ 1 ಕೋಟಿ ರೂಪಾಯಿಗೂ ಅಧಿಕ ಮೊತ್ತ ಮದ್ಯ, ಮದ್ಯಸಾರ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕೇರಳ ರಾಜ್ಯದ ಪರಾಂಬಿಲ್ ಗ್ರಾಮದ ಮುಹಮ್ಮದ್ ನಿಟ್ಟೂಕರನ್ ಬಂಧಿತ ಆರೋಪಿ. ಈತ ಅನಧಿಕೃತವಾಗಿ 525 ಪೆಟ್ಟಿಗೆ ಮದ್ಯವನ್ನು ಗೋವಾ ರಾಜ್ಯದಿಂದ ಕೇರಳ ರಾಜ್ಯಕ್ಕೆ ಲಾರಿಯ ಮೂಲಕ ಸಾಗಿಸುತ್ತಿದ್ದಾಗ ಶಿರಸಿ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.
ಪ್ರಕರಣದಲ್ಲಿ 94.50 ಲಕ್ಷ ರೂ. ಮೌಲ್ಯದ ಮದ್ಯ, ಸುಮಾರು 30 ಸಾವಿರ ರೂಪಾಯಿ. ಮೌಲ್ಯದ ಸ್ಪಿರಿಟ್, 10 ಲಕ್ಷ ರೂ ಮೌಲ್ಯದ ಲಾರಿ ಸೇರಿಯನ್ನು ಜಫ್ತಿ ಮಾಡಲಾಗಿದೆ. ಶಿರಸಿ ಅಬಕಾರಿ ಉಪ ಅಧೀಕ್ಷಕ ಹೆಚ್.ಎಸ್.ಶಿವಪ್ಪ, ಶಿರಸಿ ಉಪ ವಿಭಾಗ ಅಬಕಾರಿ ನಿರೀಕ್ಷಕ ಇವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಸಿಬ್ಬಂದಿಗಳಾದ ನಿತ್ಯಾನಂದ ಕೆ.ವೈದ್ಯ, ಗಜಾನನ ಎಸ್. ನಾಯ್ಕ, ಈರಣ್ಣ ಗಾಳಿ, ಅಬ್ದುಲ್ ಮಕಾನ್ ದಾರ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ಶಿರಸಿ