Follow Us On

WhatsApp Group
Focus News
Trending

ಬೃಹತ್ ಗಾತ್ರದ ಮೊಸಳೆ ಸಾವು: ಅರಣ್ಯಾಧಿಕಾರಿಗಳಿಂದ ಅಂತ್ಯಕ್ರಿಯೆ

ಹಳಿಯಾಳ: ದಾಂಡೇಲಿಯ ಹತ್ತಿರದ ಬೈಲಪಾರ- ಐಪಿಎಮ್ ಬಳಿ ಕಾಳಿನದಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೊಸಳೆ ಸುಮಾರು 10 ಅಡಿ ಉದ್ದವಿದೆ.

ಮೊಸಳೆ ಸತ್ತಿರುವುದನ್ನು ಕಂಡು ಸ್ಥಳೀಯರು ಅರಣ್ಯ ಲ ಇಲಾಖೆಗೆ ಮಾಹಿತಿ ನೀಡಿದ್ದಾರೆ.‌ಸ್ಥಳಕ್ಕಾಗಮಿಸಿದ ದಾಂಡೇಲಿ ಹಾಗೂ ವಿರ್ನೋಲಿಯ ವಲಯ ಅರಣ್ಯಾಧಿಕಾರಿಗಳು ಮೊಸಳೆ ನದಿಯಲ್ಲಿ ಸತ್ತು ಬಿದ್ದಿರುವುದನ್ನು ಖಚಿತಪಡಿಸಿ, ಸ್ಥಳೀಯರ ಸಹಕಾರದೊಂದಿಗೆ ಮೊಸಳೆಯನ್ನು ದಡಕ್ಕೆ ತಂದಿದ್ದು, ಮೊಸಳೆಯ ಅಂತ್ಯಕ್ರಿಯೆ ನಡೆಸಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button