ನರ್ಸ್ ಸೇವೆ ಮಾಡುತ್ತಿದ್ದವಳು ತೆಗೆದುಕೊಂಡಳು ದುಡುಕಿನ ನಿರ್ಧಾರ;ಇಲಿ ಪಾಷಾಣ ಸೇವಿಸಿ ಸಾವು
ಅಂಕೋಲಾ: ಇಲಿ ಪಾಷಾಣ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ , ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ನಡೆದಿದೆ. ಮಾದನಗೇರಿ ಕ್ರಾಸ್ ನಿವಾಸಿ ಜಯಂತಿ ಸತೀಶ ಗೌಡ (32) ಮೃತ ದುರ್ದೈವಿಯಾಗಿದ್ದಾಳೆ.
- ಅರಬೈಲ್ ಘಾಟ್ ಬಳಿ ಭೀಕರ ಅಪಘಾತ: 9 ಜನರ ಸಾವು: 14 ಕ್ಕೂ ಹೆಚ್ಚು ಜನರಿಗೆ ಗಾಯ
- ಮರಳು, ಸಿಮೆಂಟ್, ಕ್ಯೂರಿಂಗ್ ಸಮಸ್ಯೆ ಇಲ್ಲ: ಖರ್ಚು ಕಡಿಮೆ: ಜಿಪ್ಸಮ್ ಪ್ಲಾಸ್ಟರ್ ಗಾಗಿ ಸಂಪರ್ಕಿಸಿ
ಮೃತಳ ಗಂಡ ಸತೀಶ ಗೌಡ ವಿಪರೀತ ಸರಾಯಿ ಕುಡಿಯುತ್ತಿದ್ದ ಆ ಕಾರಣದಿಂದ ಬೇಸತ್ತ ಈಕೆ ಇತ್ತೀಚೆಗೆ ಸರಾಯಿ ಕುಡಿಯದಂತೆ ಗಂಡನಿಗೆ ಆಣೆ ಪ್ರಮಾಣ ಮಾಡಿಸಿದ್ದಳು ಕೆಲವು ದಿನಗಳ ಕಾಲ ಸರಾಯಿ ಬಿಟ್ಟ ಗಂಡ ಮತ್ತೆ ಸರಾಯಿ ಕುಡಿಯುವುದನ್ನು ಆರಂಭಿಸಿದ್ದಾನೆ ಎನ್ನಲಾಗಿದೆ.ಇದರಿಂದ ಮನನೊಂದ ಆಕೆ ಜುಲೈ 1 ರಂದು ಇಲಿ ಪಾಷಾಣ ಸೇವಿಸಿದ್ದಳು ಎಂದು ಅಂಕೋಲಾ ತಾಲೂಕು ಗುಂಡಬಾಳ ನೆವಳಸೆ ನಿವಾಸಿ ರಮೇಶ ಮಾದೇವ ಗೌಡ ಎನ್ನುವವರು ಪೋಲೀಸ ದೂರು ನೀಡಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲಿ ಪಾಷಾಣ ಸೇವಿಸಿ ಅಸ್ವಸ್ಥಳಾಗಿದ್ದ ಮಹಿಳೆಯನ್ನು ಮೊದಲು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತ ಪಟ್ಟಿದ್ದು ಕುಟುಂಬಸ್ಥರಲ್ಲಿ ಶೋಕದ ವಾತಾವರಣ ಮೂಡಿಸಿದೆ.
ಖಾಸಗಿ ಆಸ್ಪತ್ರೆಯಲ್ಲಿ ನರ್ಸ ಆಗಿ ನೂರೆಂಟು ರೋಗಿಗಳ ಆರೋಗ್ಯ ಚೇತರಿಕೆಗೆ ಸೇವೆ ಸಲ್ಲಿಸುತ್ತಿದ್ದ ಈ ಹೆಣ್ಣು ಮಗಳು ಒಮ್ಮೇಲೆ ದುಡುಕಿನ ನಿರ್ಧಾರ ಕೈಗೊಳ್ಳ ಬಾರದಿತ್ತು ಎಂದು ಕೆಲವರಾಡಿಕೊಂಡರೆ, ಮೃತಳ ಕುಟುಂಬಸ್ಥರ ಪರವಾಗಿ ಪೊಲೀಸ ದೂರಿನಲ್ಲಿ ಆಪಾದಿಸಿದಂತೆ ಮೃತಳ ಪತಿ ಸತೀಶ ಗೌಡ ಸರಾಯಿ ಚಟದ ದಾಸನಾಗಿರದೇ ,ಈ ಹಿಂದೆ ಸ್ಥಳೀಯ ಗ್ರಾಪಂ ಸದಸ್ಯನಾಗಿ, ಈಗಲೂ ಅಂಗಡಿ ಮತ್ತಿತರ ಯಶಸ್ವೀ ವ್ಯಾಪಾರ – ವ್ಯವಹಾರದ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಗಳಿಸಿಕೊಂಡಿದ್ದ,
ಆದರೂ ಆತನ ಮೇಲೆ ವಿಪರೀತ ಸರಾಯಿ ಚಟದ ಆರೋಪ ಹೊರಿಸಿರುವುದು ಎಷ್ಟು ಸರಿ ಎಂಬ ಮಾತು ಅಲ್ಲಲ್ಲಿ ಕೇಳಿಬಂದಿದೆ. ಒಟ್ಟಿನಲ್ಲಿ ಕಾರಣಗಳೇನೇ ಇದ್ದರೂ ಪುಟಾಣಿ ಮಕ್ಕಳಿರುವ ಅವರ ಸಂಸಾರದಲ್ಲಿ ಈ ದುರ್ಘಟನೆ ನಡೆಯಬಾರದಿತ್ತು ಎಂದು ಕುಟುಂಬದ ಹಿತೈಷಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ