Follow Us On

WhatsApp Group
Focus NewsImportant
Trending

ಮೂರು ಮಕ್ಕಳ ಹೆತ್ತಳಾ ಮಹಾತಾಯಿ: ಸರ್ಕಾರಿ ಆಸ್ಪತ್ರೆಯಲ್ಲೂ ದೇವರಂಥ ವೈದ್ಯರಿದ್ದಾರೆ ನೋಡಿ

ಅಂಕೋಲಾ: ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವರೇ ಹೆಚ್ಚು. ಆದರೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದು ಸೇವೆ ಸಲ್ಲಿಸುವ ಕೆಲವರು ತಮ್ಮ ಸೇವೆಯ ಮೂಲಕ ಅವರಿಗರಿವಿಲ್ಲದೆ  ಕೆಲವರ ಪಾಲಿಗೆ ಅವರೇ ದೇವರೆನಿಸುವ ಹಲವಾರು ನಿದರ್ಶನಗಳಿವೆ. ಉಡುಪಿಯ ಪ್ರಸಿದ್ಧ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀ ಒರ್ವಳಿಗೆ ಕ್ಲಿಷ್ಟಕರವಾಗಿದ್ದ ಶಸ್ತಚಿಕಿತ್ಸೆ ಮಾಡಿ  ತಾಯಿ ಗರ್ಭದಿಂದ  ಮೂವರು ಪುಟ್ಟ ಕಂದಮ್ಮಗಳನ್ನು ಹೊರತೆಗೆಯಲಾಗಿದ್ದು, ಈ ಅಪರೂಪದ ಘಟನೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯವೂ ಸುರಕ್ಷಿತವಾಗಿರುವಂತೆ ನೋಡಿ ಕೊಳ್ಳುವ ಮೂಲಕ  ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ತಂಡ ತಮ್ಮ ಸೇವಾ ಗುಣಮಟ್ಟ ಪ್ರದರ್ಶಿಸಿ ಒಂದರ್ಥದಲ್ಲಿ ಬಡ ಕುಟುಂಬದ ಪಾಲಿಗೆ ದೇವರೇ ಆಗಿದ್ದಾರೆ.                       

ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮಪಂಚಾಯತಿ ವ್ಯಾಪ್ತಿಯ ಕಲ್ಲೇಶ್ವರದ ನಿವಾಸಿ ಸುನೀತಾ ತಮ್ಮು ಸಿದ್ದಿ ಎಂಬಾಕೆಯೇ ತ್ರಿವಳಿ ಮಕ್ಕಳನ್ನು ಹೆತ್ತ ಮಹಾತಾಯಿ ಆಗಿದ್ದಾಳೆ.  ಈ ಮಹಿಳೆಯ ಉದರದಲ್ಲಿ ಮೂರು ಶಿಶುಗಳಿದ್ದು, ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಕ್ಕಳಿಗೆ ಅಪಾಯದ ಸಾಧ್ಯತೆ ಇರುವುದರಿಂದ ತಾಲೂಕಿನ ಹಾಗೂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು  ಯಾರೋಬ್ಬರೂ ಮುಂದೆ ಬಂದಿರಲಿಲ್ಲ ಎನ್ನಲಾಗಿತ್ತು. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಪಕ್ಕದ ಜಿಲ್ಲೆಯಾದ ಉಡುಪಿಯ Government meternity And Children Hospital ಗೆ ಸುನೀತಾಳನ್ನು ದಾಖಲಿಸಿ ಅವಳ ಆರೋಗ್ಯ ತಪಾಸಣೆ ನಡೆಸಿ, ಬಡ ಕುಟುಂಬಸ್ಥರಲ್ಲಿ ಧೈರ್ಯ ತುಂಬಿ ,ಸೂಸುತ್ರ ಹೆರಿಗೆ ಮಾಡಿಸಲಾಯಿತು. 

ಡಾ. ಕವಿತಾ ಭಟ್ಟ, ಡಾ. ರಜನಿ, ಡಾ ಸೂರ್ಯನಾರಾಯಣ, ಡಾ ಗಣಪತಿ ಹೆಗಡೆ ಮತ್ತು ಡಾ ಮಹಾದೇವ ಭಟ್ಟರನ್ನೊಳಗೊಂಡ ಪ್ರಸೂತಿ – ಅರವಳಿಕೆ ಮತ್ತಿತರ ವಿಭಾಗದ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಉದರ ಶಸ್ತ್ರ ಚಿಕಿತ್ಸೆ ( ಸಿಸೇರಿಯನ್ ) ನೆರವೇರಿಸಿತು, ಈಗ ತಾಯಿ ಹಾಗೂ ಮೂವರು ನವಜಾತ ಶಿಶುಗಳು ಆರೋಗ್ಯದಿಂದದ್ದು ಮಹಿಳೆಯ ಕುಟುಂಬದವರೂ ವೈದ್ಯರ ಬಗ್ಗೆ ಕೃತಜ್ಞತೆಯ ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ಬದಲಾಗುತ್ತಿರುವ ಕಾರ್ಪೋರೇಟ್ ಸಂಸ್ಕೃತಿಯ ಇಂದಿನ ಆಧುನಿಕ ಜಗತ್ತಿನಲ್ಲಿ ವ್ಯಾಪಾರಿ ವೃತ್ತಿ ಮನೋಭಾವನೆ ತೋರ್ಪಡಿಸದೇ, ಪವಿತ್ರ ವೈದ್ಯ ವೃತ್ತಿಗೆ ಕಳಶ ಪ್ರಾಯರಾಗಿ,  ವೈದ್ಯೋ ನಾರಾಯಣೊ ಹರಿ ಎಂಬ ಉಕ್ತಿಯನ್ನು ನೆನಪಿಸುವ ಉಡುಪಿ ಸರ್ಕಾರಿ ಆಸ್ಪತ್ರೆ ವೈದ್ಯರ ಮತ್ತು ಇಲ್ಲಿನ ಸಿಬ್ಬಂದಿಗಳ ಸೇವಾ ಮನೋಭಾವನೆ ಮೆಚ್ಚಲೇ ಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button