Follow Us On

WhatsApp Group
Focus NewsImportant
Trending

ಕಿರಾಣಿ ಅಂಗಡಿಯಲ್ಲಿ ಕಳುವು: ಸಿಗರೇಟ್ ಕದ್ದೊಯ್ದ ಕಳ್ಳರು!

ಭಟ್ಕಳ: ಮಣ್ಕುಳಿಯ ಪುಷ್ಪಾಂಜಲಿ ಚಿತ್ರಮಂದಿರದ ಮುಂಭಾಗದಲ್ಲಿರುವ ಕಿರಾಣಿ ಅಂಗಡಿಯೊoದನ್ನು ಯಾರೋ ಕಳ್ಳರು ಮುರಿದು ನಗದು ಹಾಗೂ ಸಿಗರೇಟ್ ಪ್ಯಾಕೇಟ್ ಕದ್ದೋಯ್ಯದ ಘಟನೆ ನಡೆದಿದೆ. ಸದಾನಂದ ತಿಮ್ಮಯ್ಯ ನಾಯ್ಕ ಮಾಲೀಕತ್ವ ಶ್ರೀ ಆಂಜನೇಯ ಜನರಲ್ ಸ್ಟೋರನ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿದ್ದು, ಅಂಗಡಿಯಲ್ಲಿದ್ದ 10 ಸಾವಿರ ನಗದು ಹಾಗೂ ಸಿಗರೇಟ ಪ್ಯಾಕೇಟ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿoದ ಈ ಭಾಗದಲ್ಲಿ ಅನೇಕ ಬಾರಿ ಕಳ್ಳತನಗಳು ನಡೆದಿದೆ.

ಮೊದಲು ರಾತ್ರಿ ನಿಲ್ಲಿಸಿಟ್ಟ ಬೈಕಿನ ಬ್ಯಾಟ್ರಿ ಕದಿಯುತ್ತಿದ್ದ ಕಳ್ಳರು ನಂತರದ ದಿನಗಳಲ್ಲಿ ಈ ಭಾಗದಲ್ಲಿರುವ ಮನೆ,ಹೋಟೆಲ್ ಹಾಗೂ ತೋಟದ ಬಾವಿಯಲ್ಲಿದ್ದ ಪಂಪ್ ಸೆಟ್ ಕಳ್ಳತನ ಮಾಡುತ್ತಿದ್ದರು. ಇದೀಗ ಅಂಗಡಿ ಕಳ್ಳತನಕ್ಕೆ ಇಳಿದಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಒಂದೇ ಗೂಡಂಗಡಿಯನ್ನು 3 ಬಾರಿ ಕಳ್ಳತನ ಮಾಡಿದ್ದರು ಹಾಗೆ ಅದೇ ರಸ್ತೆಯಲ್ಲಿರುವ ಇನ್ನೊಂದು ಅಂಗಡಿಯನ್ನು ಕೂಡ ಕಳ್ಳತನಕ್ಕೆ ಯತ್ನಿಸಿ ವಿಫಲರಾಗಿದ್ದರು. ಇದೀಗ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್ ಒಂದರಲ್ಲಿಯೂ ಕೂಡ ಕಳ್ಳತನ ಮಾಡಿ ಹೋಟೆಲನಲ್ಲಿದ್ದ ನಗದನ್ನು ಕದ್ದು ಪರಾರಿಯಾಗಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button