ಅಂಕೋಲಾ: ರಾಸಾಯನಿಕ ತುಂಬಿದ ಟ್ಯಾಂಕರ್ ಲಾರಿ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ನವಗದ್ದೆ ಬಳಿ ಸಂಭವಿಸಿದೆ.
ಟ್ಯಾಂಕರ್ ಚಾಲಕ ಉತ್ತರ ಪ್ರದೇಶದ ಕಬೀರನಗರ ನಿವಾಸಿ ಮೋಯಿದ್ ಅಹ್ಮದ್ ಸೈಯದ್ ಅಹ್ಮದ್ (36) ಗಾಯಗೊಂಡ ವ್ಯಕ್ತಿ ಯಾಗಿದ್ದು ,ಈತ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಅತಿ ವೇಗ ಮತ್ತು ಅಜಾಗೂತೆಯಿಂದ ಲಾರಿ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆ ಎಡಬದಿಯ ಕಚ್ಚಾ ರಸ್ತೆಗೆ ಟ್ಯಾಂಕರ್ ಪಲ್ಟಿ ಕೆಡವಿದ್ದಾನೆ.
ಅಪಘಾತದಿಂದ ಟ್ಯಾಂಕರ್ ಲಾರಿ ಮುಂಭಾಗ ಜಖಂ ಗೊಂಡರೂ ಅದೃಷ್ಟವಶಾತ್ ಚಾಲಕನ ತಲೆಗೆ ಮತ್ತು ಎಡ ಕೈಗೆ ಮಾತ್ರ ಗಾಯಗಳಾಗಿವೆಯೇ ಹೊರತೂ ಇತರೆ ಹೆಚ್ಚಿನ ಹಾನಿಯಾಗಿಲ್ಲ.,
ಟ್ಯಾಂಕರ್ ಮಾಲಿಕ ಮುಂಬೈ ಚೇಂಬುರ್ ನಿವಾಸಿ ತೇಜಂದರ್ ಪಾಲ ಸಿಂಗ್ ಹರಭಜನ್ ಸಿಂಗ್ ಅವರು ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ ಲಾರಿ ಮೇಲೆತ್ತಿಸಿ ನಂತರ ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಎಂ.ಎಂ.ಎ ಗ್ಯಾಸ್ ತುಂಬಿದ್ದ ಟ್ಯಾಂಕರ್ ಬಿದ್ದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಕಂಡುಬಂದಿತ್ತು. ಪೋಲೀಸ್ ಹಾಗೂ ಅಗ್ನಿನಾಮಕ ದಳದವರು ಸ್ಥಳಕ್ಕೆ ಆಗಮಿಸಿ, 3 ಕ್ರೇನ್ ಗಳನ್ನು ಬಳಸಿ ಪಲ್ಟಿಯಾಗಿ ಬಿದ್ದಿದ್ದ ಗ್ಯಾಸ್ ಟ್ಯಾಂಕರನ್ನು ಸುರಕ್ಷಿತವಾಗಿ ಮೇಲೆತ್ತಿಸಿ ಟ್ಯಾಂಕರ ವಾಹನವನ್ನು ಸಹಜ ಸ್ಥಿತಿಯಲ್ಲಿ ನಿಲ್ಲಿಸಿ ಆತಂಕ ದೂರ ಮಾಡಿದರು. ಪಿಎಸೈ ಪ್ರವೀಣ ಕುಮಾರ , 112 ತುರ್ತು ವಾಹನ ಸಿಬ್ಬಂದಿಗಳು ಹೆದ್ದಾರಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ