ಗ್ರಂಥಾಲಯಕ್ಕೆ ಬೆಂಕಿ; ಅಪಾರ ಹಾನಿ: ಏನಾಯ್ತು ನೋಡಿ?

ಶಾರ್ಟ್ ಸರ್ಕ್ಯೂಟ್ ತಂದ ಅವಾಂತರ

ಹೊನ್ನಾವರ: ಪಟ್ಟಣದ ಪಟ್ಟಣ ಪಂಚಾಯತ್ ಆವರಣದಲ್ಲಿರುವ ಕೇಂದ್ರದ ಗ್ರಂಥಾಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ವಿವಿಧ ಉಪಕರಣಗಳು ಸುಟ್ಟು ಕರಕಲಾಗಿದೆ.

ಮಧ್ಯಾಹ್ನ ಸಮಯದಲ್ಲಿ ಏಕಾಏಕಿ ಗ್ರಂಥಾಲಯದ ಒಳಗಡೆ ಬಾರಿ ಹೊಗೆಯು ಕಾಣಿಸಿಕೊಂಡಾಗ ಸಮೀಪದಲ್ಲೆ ಇರುವ ಪಟ್ಟಣ ಪಂಚಾಯತಿ ಸಿಬ್ಬಂದಿ ಹತ್ತಿರ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ತನ್ನ ಇಲಾಖೆಯ ಇತರೆ ಸಿಬ್ಬಂದಿಯ ಜೊತೆಗೂಡಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ನಂತರ ಬಾಗಿಲು ಮುರಿದು ಒಳಪ್ರವೇಶಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅವಘಡ ಸಂಭವಿಸುವುದನ್ನು ತಡೆದಿದ್ದಾರೆ. ಕಂಪ್ಯೂಟರ್, ಕುರ್ಚಿ ಮೇಜು, ಫ್ಯಾನ್ ಹಾಗೂ ಸದಸ್ಯತ್ವದ ಕಾರ್ಡ್ ಸುಟ್ಟು ಕರಕಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version