Join Our

WhatsApp Group
Important
Trending

ಸಿಬಿಎಸ್ಇ ಶೇ. 100 ಫಲಿತಾಂಶ ದಾಖಲಿಸಿದ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನ್

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ವತಿಯಿಂದ ನಡೆಯುತ್ತಿರುವ ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಸ್ತುತ ಸಾಲಿನ (2021-22) ಆಲ್ ಇಂಡಿಯಾ ಸೆಕೆಂಡರಿ ಸ್ಕೂಲ್ ಎಕ್ಷಾಮಿನೇಶನ್ (AISSE) ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ. 100 ಫಲಿತಾಂಶ ದಾಖಲಿಸಿದ್ದಾರೆ.

ಸಂಜನಾ ಎಸ್. ಪಟಗಾರ – 96.6%, ಶ್ರೀಷಾ ಆರ್. ಆಚಾರ್ಯ – 92.8%, ರಕ್ಷಾ ಎನ್. ನಾಯ್ಕ –91.8%, ಶ್ರಿಯಾ ಜಿ. ಅಡಿಮುಳೆ – 91%, ಮನೀಶ ಎಂ. ಪಟಗಾರ – 88.2%, ರಿಷಬ ಕುದ್ರಿಗಿ-87.8%, ಸುಮೀತ್ ಶಿಗ್ಗಾವಿ – 87.4%, ಹಿರಲ್ ಪಿ. ಪಟೇಲ್ – 86.4%, ಮಹಮ್ಮದ್ ಒವೈಸ್ ಆಗಾ – 84.8%, ವಿಜೇತ ಎಲ್. ನಾಯ್ಕ – 84.4, ವೈಭವ್ ವಿ. ಪಾಲ್ಕರ್ – 84%, ಅಸದ್ ಎಂ. ಶೇಖ್ – 83.4%, ಧೀರಜ್ ವಿ. ನಾಯ್ಕ – 82.8%, ವೈಭವಿ ಎಸ್. ದೇಶಭಂಡಾರಿ – 81%, ಸಂದೇಶ ಎಂ. ಜಿ – 80% ಅಂಕ ಗಳಿಸಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 53 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button