Follow Us On

WhatsApp Group
Focus News
Trending

ಶ್ರೀ ಭಾರತಿಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ಕರಾಟೆ ಕಾರ್ಯಕ್ರಮ ಉದ್ಘಾಟನೆ

ಹೊನ್ನಾವರ: ಶ್ರೀ ಭಾರತಿಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ಕರಾಟೆ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಕರಾದ ಶ್ರೀ ಜಿ.ಟಿ.ಹೆಬ್ಬಾರ ರವರು ಆಗಮಿಸಿದ್ದರು. ಮತ್ತು ಕಾರ್ಯಕ್ರಮದಲ್ಲಿ ಶ್ರೀ ಭಾರತೀ ಎಜ್ಯುಕೇಶನ್‌ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ್ ವಿ. ಹೆಗಡೆಯವರು ಮತ್ತು ಸದಸ್ಯರಾದ ಶ್ರೀ ವಿ.ಜಿ. ಹೆಗಡೆ , ಗುಡ್ಗೆಇವರು ಉಪಸ್ಥಿತರಿದ್ದರು .ಹಾಗೂ ಕರಾಟೆಶಿಕ್ಷಕರಾದ ರೆನ್ಶಿ ವಾಮನ್ ಪಾಲನ್ ರವರು ಮತ್ತು ಮುಖ್ಯ ಶಿಕ್ಷಕಿಯಾದ ಶ್ರೀಮತಿ ವೈಲೆಟ್ ಫರ್ನಾಂಡಿಸ್‌ರವರು ಉಪಸ್ಥಿತರಿದ್ದರು.

ಕರಾಟೆ ಶಿಕ್ಷಕರಾದ ರೆನ್ಶಿ ವಾಮನ್ ಪಾಲನ್ ರವರು ಹೊನ್ನಾವರತಾಲೂಕಿನಲ್ಲಿ ಪ್ರಥಮವಾಗಿ ಶ್ರೀ ಭಾರತೀ ಶಾಲೆಯಲ್ಲಿಕರಾಟೆತರಗತಿಯನ್ನು ಪ್ರಾರಂಭಿಸಿತ್ತಿದ್ದೇವೆ. ಹಾಗೂ ಶಾಲೆಯ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿಗುರುತಿಸುವಂತೆ ಮಾಡುತ್ತೇನೆಂದು ಹೇಳಿದರು. ಉದ್ಘಾಟಕರಾದ ಶ್ರೀ ಜಿ.ಟಿ.ಹೆಬ್ಬಾgರವರು ಮಾತನಾಡಿಕರಾಟೆಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರಿಸಿಕೊಳ್ಳಬಹುದು ಎಂದರು.

ಶ್ರೀ ಭಾರತೀಎಜ್ಯುಕೇಶನ್‌ಟ್ರಸ್ಟ್ ನಶ್ರೀ ವಿ.ಜಿ. ಹೆಗಡೆ ,ಗುಡ್ಗೆರವರು ಮಾತನಾಡಿಕರಾಟೆ ಪದದಅರ್ಥವನ್ನು ಮತ್ತುಕರಾಟೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಶ್ರೀ ಭಾರತೀ ಎಜ್ಯುಕೇಶನ್‌ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ್ ವಿ.ಹೆಗಡೆಯವರು ಮಾತನಾಡಿಕರಾಟೆಯಿಂದಆತ್ಮರಕ್ಷಣೆ ಮಾಡಿಕೊಳ್ಳಬಹುದುಎನ್ನುವುದನ್ನು ತಿಳಿಸಿಕೊಟ್ಟರು.

ಶ್ರೀ ಭಾರತಿಆಂಗ್ಲ ಮಾಧ್ಯಮ ಶಾಲೆಯಎಲ್ಲಾ ವಿದ್ಯಾರ್ಥಿಗಳು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಜಿ.ಎಸ್.ವಿನುತಾ ಸ್ವಾಗತಿಸಿದಳು. ಶಿಕ್ಷಕಿಯಾದ ಶ್ರೀಮತಿ ದಿವ್ಯಾಡಿಸೋಜಾರವರು ನಿರೂಪಿಸಿದರು. ವಿದ್ಯಾರ್ಥಿನಿಯಾದ ಕುಮಾರಿ ಧನ್ಯಾ ನಾಯ್ಕ ವಂದಿಸಿದಳು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ

Back to top button