Important
Trending

ಕಚೇರಿಯಲ್ಲೇ ಸಾವಿಗೆ ಶರಣಾದ ಅಬಕಾರಿ ಉಪನಿರೀಕ್ಷಕ: ಡೆತ್ ನೋಟಿನಲ್ಲಿ ಏನಿದೆ? ಮೃತನ ಸಹೋದರ ಹೇಳಿದ್ದೇನು?

ಕಳೆದ 25 ವರ್ಷಗಳಿಂದ ಅಬಕಾರಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ

ದಾಂಡೇಲಿ: ಅದಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನನೊಂದ ಅಬಕಾರಿ ಉಪನಿರೀಕ್ಷಕರೊಬ್ಬರು ಅಬಕಾರಿ ಕಚೇರಿಯಲ್ಲೆ ಸಾವಿಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಡೆತ್ ನೋಟ್ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಅಬಕಾರಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ 56 ವರ್ಷ ವಯಸ್ಸಿನ ಮೂಲತಃ ಹೊನ್ನಾವರ ತಾಲ್ಲೂಕಿನವರಾದ ಅಬಕಾರಿ ಉಪ ನಿರೀಕ್ಷಕ ಗಣೇಶ ವೈದ್ಯ ಮೃತ ವ್ಯಕ್ತಿ. ಇವರು ನಸುಕಿನ ವೇಳೆಯಲ್ಲಿ ಅಬಕಾರಿ ಕಚೇರಿಯಲ್ಲೆ ನೇಣಿಗೆ ಶರಣಾಗಿದ್ದಾರೆ.

ಅರಿಶಿನ ವ್ಯಾಪಾರಕ್ಕೆಂದು ಕರೆಸಿಕೊಂಡು ಹಲ್ಲೆ ; ಹಣ, ಆಭರಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ ಆರೋಪಿಗಳ ಬಂಧನ

ಮೃತರು ಅವಿವಾಹಿತರಾಗಿದ್ದು, ತಾಯಿ, ಇಬ್ಬರು ಸಹೋದರಿಯರು ಮತ್ತು ಓರ್ವ ಅಣ್ಣ ಹಾಗೂ ಅಪಾರ ಸಂಖ್ಯೆಯ ಬಂಧು- ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರ ಯಶವಂತ ವೈದ್ಯ ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದು, ಸಹೋದರ ಜಿ.ವಿ.ವೈದ್ಯರ ಸಾವಿಗೆ ಅಬಕಾರಿ ಉಪ ನಿರೀಕ್ಷರೇ ಕಾರಣ ಎಂದು ದೂರಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಆ ಬಳಿಕ ಅವರ ಹುಟ್ಟೂರಾದ ಹೊನ್ನಾವರಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗಿದೆ

ವಿಸ್ಮಯ ನ್ಯೂಸ್, ಹೊನ್ನಾವರ

Back to top button