Focus News
Trending

ನಮಗೆ ನಾವೇ ಸೈನಿಕರಾಗಿ ಭಾರತವನ್ನು ಮತ್ತೆ ಸ್ವರ್ಣಿಮ ಭಾರತವನ್ನಾಗಿ ಮಾಡೋಣ: ಭಾರತಿ

ಕುಮಟಾ : ದುಷ್ಟ ಗುಣಗಳಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ನಮಗೆ ನಾವು ಸೈನಿಕರಾಗಿ ಮನೋಬಲವನ್ನು ವೃದ್ಧಿ ಮಾಡಿಕೊಂಡು ಭಾರತವನ್ನು ಮತ್ತೆ ಸ್ವರ್ಣಿಮ ಭಾರತವನ್ನಾಗಿ ಮಾಡೋಣ ಎಂದು ದೀವಗಿಯ ಸತ್ಯ ಗೀತಾ ಜ್ಞಾನ ಯೋಗ ಅಧ್ಯಯನ ಕೇಂದ್ರದ ಪ್ರವಚನಕಾರ್ತಿ ಎ ಆರ್ ಭಾರತಿ ಹೇಳಿದರು. ಅವರು ತಾಲೂಕಿನ ವನ್ನಳ್ಳಿಯಲ್ಲಿ ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ವನ್ನಳ್ಳಿಯ ಪ್ರೌಢಶಾಲೆಯ ಸಹಯೋಗದೊಂದಿಗೆ ನಡೆದ ಸ್ವಾತಂತ್ರ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಎನ್ನುವ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂದೇಶ ನೀಡಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಮಟಾ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಜೈವಿಠ್ಠಲ ಕುಬಾಲ ಮಾತನಾಡಿ ಸ್ವಾತಂತ್ರö್ಯ ಅಮೃತ ಮಹೋತ್ಸವ ಆಚರಣೆಯನ್ನು ಮಾಡ್ತಾ ದೇಶಾಭಿಮಾನವನ್ನು ಹೆಚ್ಚಿಸಿ ದೇಶವನ್ನು ಸದೃಢಗೊಳಿಸಲು ಇದೊಂದು ಅರ್ಥಪೂರ್ಣವಾದ ವಿನೂತನ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಂಗವಾಗಿ ಕೊರೋನಾ ಸಂದರ್ಭದಲ್ಲಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ ಲಕ್ಷಿ ಹನುಮಂತ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಾಪಕ ಎಮ್ ಜಿ ನಾಯ್ಕ ವಹಿಸಿದ್ದರು. ಪ್ರಾರಂಭದಲ್ಲಿ ಕು ಶಾಂಭವಿ ಎಚ್ ಅಂಬಿಗ ಹಾಗೂ ಜ್ಯೋತಿ ಎಸ್ ದೇಶಭಂಡಾರಿ ಇವರು ದೈವೀ ಸ್ತುತಿಯೊಂದಿಗೆ ದೇಶಭಕ್ತಿ ಗೀತೆ ಹಾಡಿದರು. ಶಾಲಾ ಶಿಕ್ಷಕ ಎಸ್ ಕೆ ಅಂಬಿಗ ಸ್ವಾಗತಿಸಿದರು. ಚೇತನಾ ಸಂಸ್ಥೆಯ ಅಧ್ಯಕ್ಷ ಆರ್ ಕೆ ಅಂಬಿಗ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಾತ್ರಭೂಮಿಗಾಗಿ ಪ್ರತಿಜ್ಞೆಯನ್ನು ಮಾಡಿಸಲಾಯಿತು. ಶಿಕ್ಷಕಿ ವೀಣಾ ನಾಯ್ಕ ವಂದಿಸಿದರು. ನಿಲೇಶ ಎನ್ ಅಂಬಿಗ, ಗೌರೀಶ ಎಮ್ ಅಂಬಿಗ, ಸಹಕರಿಸಿದರು. ಶಾಲಾ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Back to top button