Important
Trending

ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡ ಬೆಳೆಸಿ ಸಿಕ್ಕಿಬಿದ್ದ: 52 ಗಾಂಜಾ ಗಿಡ ಸಮೇತ ಆರೋಪಿ ವಶಕ್ಕೆ

ಸುಮಾರು 6.9 ಕೆಜಿ ತೂಕದ ತೊಂಬತ್ತು ಸಾವಿರ ರೂ ಮೌಲ್ಯದ ಗಾಂಜಾ ಗಿಡ ವಶ

ಮುಂಡಗೋಡ: ಇಲ್ಲಿನ ಟಿಬೇಟಿಯನ್ ಕ್ಯಾಂಪ್ ವ್ಯಕ್ತಿಯೋರ್ವ ಮನೆಯ ಹಿತ್ತಲಲ್ಲಿ ಬೆಳೆಸಿದ್ದ 52 ಗಾಂಜಾ ಗಿಡ ಬೆಳೆದಿರುವ ಸಂಗತಿ ಇದೀಗ ಬಯಲಿಗೆ ಬಂದಿದ್ದು, ಪೊಲೀಸರು ದಾಳಿ ನಡೆಸಿ, ಗಿಡದ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಗಾಂಜಾ ಗಿಡಗಳು ಎರಡರಿಂದ ಆರು ಫೂಟ್ ಎತ್ತರದವರೆಗೆ ಬೆಳೆದಿದೆ. ಸುಮಾರು 6.9 ಕೆಜಿ ತೂಕದ ತೊಂಬತ್ತು ಸಾವಿರ ರೂ ಮೌಲ್ಯದ ಗಾಂಜಾ ಗಿಡಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಕ್ಯಾಂಪ್ ನಂ.4ರ ನಾಮಗೇಲ್ ಚೋಪೇಲ್ ಎಂಬ ಟಿಬೇಟಿಯನ್ ವ್ಯಕ್ತಿ ಬಂಧಿತ ಆರೋಪಿ ತಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button