Important
Trending

ಗ್ರಾ.ಪಂ. ಪಿಡಿಓ ಸಿ.ಮಂಜುನಾಥ ನಾಯಕ ಉಸ್ತುವಾರಿ ಸಚಿವರ ಕಚೇರಿಗೆ ನಿಯೋಜನೆ

ಅಂಕೋಲಾ : ತಾಲೂಕಿನ ಡೋಂಗ್ರಿ ಹಾಗೂ ಅಚವೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಿ.ಮಂಜುನಾಥ ನಾಯಕ ಇವರನ್ನು ಉ.ಕ.ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ನಿಯೋಜನೆ ಮಾಡಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಕಾರು: ಪವಾಡ ಸದೃಶರೀತಿಯಲ್ಲಿ ಅಪಾಯದಿಂದ ಪಾರಾದ ನಾಲ್ವರು

Msc ಪದವೀಧರರಾಗಿರುವ ಮಂಜುನಾಥ ಟಿ ಸಿ ಅವರು 13 ವರ್ಷಗಳ ಕಾಲ ವಿವಿಧ ಗ್ರಾಪಂ ಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಕಂದಾಯ ಮಂತ್ರಿ ಆರ್ ಅಶೋಕ ಅಚವೆ ಗ್ರಾಪಂ ಗ್ರಾಮ ವಾಸ್ತವ್ಯಕ್ಕೆ ಬಂದಾಗ, ಕಾರ್ಯಕ್ರಮದ ಯಶಸ್ಸಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸಿದ್ದರು.

ಇವರ ಆಡಳಿತಾವಧಿಯ ಪಂಚಾಯತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ, ಸ್ವಚ್ಛತಾ ಪ್ರಶಸ್ತಿ, ಅಮೃತ ಗ್ರಾಪಂ ಪುರಸ್ಕಾರ ಲಭಿಸಿ ರುವದನ್ನು ಸ್ಮರಿಸಬಹುದಾಗಿದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಜಕುಮಾರ ಬಂಟ ಅವರಿಗೆ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡು ಹಿನ್ನೆಲೆಯಲ್ಲಿ,ಅವರ ಸ್ಥಾನದಲ್ಲಿ ಮಂಜುನಾಥ್ ಅವರನ್ನು ನಿಯೋಜನೆಗೊಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button