Follow Us On

Google News
Important
Trending

ಗ್ರಾಹಕರ ಸೋಗಿನಲ್ಲಿ ಬಂದು ಮೆಡಿಕಲ್ ಶಾಪ್ ನಲ್ಲಿ ಬುರ್ಖಾಧಾರಿ ಮಹಿಳೆಯರ ಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ನೋಡಿ

ಅನುಮಾನ ಬಂದು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ

ಭಟ್ಕಳ: ಅಂಗಡಿಗಳಲ್ಲಿ ಸಿಸಿಟಿವಿಯ ಭದ್ರತೆಯಿದ್ದರೂ ಇತ್ತಿಚಿನ ದಿನಗಳಲ್ಲಿ ಮಾಲೀಕರನ್ನು ಯಾಮಾರಿಸಿ, ಕಳ್ಳತನ ಮಾಡುವ ಪ್ರಕರಣ ಹೆಚ್ಚುತ್ತಿದೆ. ಇಂತಹದೇ ಪ್ರಕರಣ ಇದೀಗ ಭಟ್ಕಳದಲ್ಲಿ ನಡೆದಿದೆ. ಹೌದು, ಭಟ್ಕಳ ಕಟ್ಟಿಗೆ ಡಿಪ್ಪೊ ಸಮೀಪ ಇರುವ ಅಪೋಲೊ ಮೆಡಿಕಲ್ ಮಳಿಗೆಯಲ್ಲಿ ಮೂವರು ಬುರ್ಕಾಧಾರಿ ಮಹಿಳೆಯರು ತಮ್ಮ ಕೈಚಳಕ ತೋರಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು: ಎರಡು ಮೊಬೈಲ್ ಹ್ಯಾಂಡ್ ಸೆಟ್, ನಗದು ಹಣ ಕಳ್ಳತನ

ಕಳ್ಳತನ ಮಾಡಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದುಮ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಸುಮಾರು 2 ಗಂಟೆಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಬುರ್ಕಾದಾರಿ ಮಹಿಳೆಯರು ಔಷಧಿ ಖರೀದಿಸುವ ನಾಟಕವಾಡಿದ್ದಾರೆ.

ಈ ವೇಳೆ ಅಲ್ಲೇ ಇದ್ದ ಸಿಬ್ಬಂದಿಯನ್ನು ಯಾಮಾರಿಸಿ ಕೈಚಳಕ ತೋರಿಸಿದ್ದು, ಔಷಧಿ ಅಂಗಡಿಯಲ್ಲಿದ್ದ ಕೆಲ ವಸ್ತುಗಳನ್ನು ತಮ್ಮ ಬುರ್ಕಾದಲ್ಲಿ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ. ಅನುಮಾನ ಬಂದು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button