Big NewsImportant
Trending

ತಂದೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು? ಸಾವಿಗೆ ಶರಣಾದ ಮಗ

ಧಾರವಾಡದಲ್ಲಿ BSE ವ್ಯಾಸಂಗ ಮಾಡುತ್ತಿದ್ದ

ಶಿರಸಿ: ಸಣ್ಣಪುಟ್ಟ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವಕರು ಸಾವಿಗೆ ಶರಣಾಗುತ್ತಿರುವ ಪ್ರವೃತ್ತಿ ಇತ್ತಿಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹೌದು, ದುರ್ಜನರ ಸಹವಾಸದಿಂದ ದೂರ ಇರು ಎಂದಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾದ ಘಟನೆ ತಾಲೂಕಿನ ಬನವಾಸಿ ಬಳಿಯ ರಾಮಾಪುರದಲ್ಲಿ ನಡೆದಿದೆ. ಹೌದು, ಪುಂಡರ ಸಹವಾಸ ಮಾಡದೇ ಉತ್ತಮವಾಗಿ ಓದು ಎಂದು ಮನೆಯವರು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ವಿದ್ಯಾರ್ಥಿಂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೀನುಗಾರಿಕೆಗೆ ತೆರಳಿದ ವೇಳೆ ಬೋಟಿನಿಂದ ಸಮುದ್ರದಲ್ಲಿ ಬಿದ್ದು ವ್ಯಕ್ತಿ ಸಾವು

ವಯಸ್ಸಿಗೆ ಬಂದ ಮಗನಿಗೆ ಬುದ್ಧಿವಾದ ಹೇಳಿದ್ದ ತಂದೆ

ಶ್ರೀಧರ ಗುಡ್ಡಪ್ಪ ಕುರುಬರ್ (21) ಮೃತ ವಿದ್ಯಾರ್ಥಿ. ಈತ ಧಾರವಾಡದಲ್ಲಿ ಬಿ ಎಸ್ ಸಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ಈತ ಮನೆಗೆ ಮರಳಿದ್ದ. ಆದರೆ, ಮನೆಗೆ ಬಂದ ವೇಳೆ ತಂದೆ, ಮಗನಿಗೆ ಸಹಜವಾಗಿ ಬುದ್ಧಿ ಮಾತು ಹೇಳಿದ್ದರು. ಇದರಿಂದ ಬೇಸರಗೊಂಡ ಮಗ, ಮನೆಯ ಕೋಣೆಯಲ್ಲಿ ಸಾವಿಗೆ ಶರಣಾಗಿದ್ದಾನೆ. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button