Big NewsImportant
Trending

ಕಾರಿನಲ್ಲಿ ಬಂದು ಬಾಲಕನನ್ನು ಅಪರಿಸಿದ ದುಷ್ಕರ್ಮಿಗಳು: ಅಂಗಡಿಯಿoದ ಮನೆಗೆ ಬರುತ್ತಿದ್ದಾಗ ರಸ್ತೆಯಲ್ಲೇ ಅಪಹರಣ

ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಬೆಳಕಿಗೆ ಬಂದ ಕಿಡ್ನಾಪ್ ಪ್ರಕರಣ

ಭಟ್ಕಳ: ಕಾರಿನಲ್ಲಿ ಬಂದ ದುಷ್ಕರ್ಮಿಗಳು ಎಂಟು ವರ್ಷದ ಬಾಲಕನನ್ನು ಅಪರಿಸಿದ ಘಟನೆ ತಾಲ್ಲೂಕಿನ ಆಜಾದ್ ನಗರದಲ್ಲಿ ನಡೆದಿದೆ. 8 ವರ್ಷದ ಬಾಲಕ ಅಂಗಡಿಯಿoದ ಬ್ರೆಡ್ ತರಲು ಹೋಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅಪಹರಣಕ್ಕೆ ಒಳಗಾದ ಬಾಲಕನನ್ನು ಅಲಿ ಸಾದಾ ಎಂದು ತಿಳಿದುಬಂದಿದೆ.

ಅಪಹರಣಕ್ಕೆ ಒಳಗಾದ ಬಾಲಕ

ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಗಂಟೆಗಳ ಕಾಲ ವಾಹನದ ಒಳಗೆ ಸಿಲಿಕಿಕೊಂಡು ಒದ್ದಾಡಿದ ಚಾಲಕ

ಬಾಲಕ ಎಷ್ಟು ಹೊತ್ತಾದರೂ ಮನೆಗೆ ಆಗಮಿಸದಿದ್ದಾಗ ಅಕ್ಕಪಕ್ಕದ ಮನೆಗಳ ಅವರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ 8 ಗಂಟೆ ಸುಮಾರಿಗೆ ಮಾರುತಿ ಇಕೋ ವ್ಯಾನ್ ಬರುತ್ತಿರುವುದು ಕಂಡು ಬಂದಿದ್ದು, ಅದರಲ್ಲಿದ್ದ ವ್ಯಕ್ತಿಯೊಬ್ಬರು ಇಳಿದು ಬಾಲಕನನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಆಜಾದ್ ನಗರ ಮೊದಲ ಕ್ರಾಸ್ ಜಾಲಿ ರಸ್ತೆ ಕಡೆಗೆ ಹೋಗುತ್ತಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರದಾದ್ಯಂತ ಆತಂಕದ ಅಲೆ ಹಬ್ಬಿದೆ. ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರದ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ತನಿಖೆ ನಡೆಸಲಾಗುತ್ತಿದೆ.

ಇದೊಂದು ಯೋಜಿತ ದುಷ್ಕೃವೇ?

ಸಂಜೆಯಿoದ ಇದೇ ಪ್ರದೇಶದಲ್ಲಿ ವಾಹನ ಸುತ್ತುತ್ತಿರುವುದು ಕಂಡು ಬಂದಿದ್ದು ಅಪಹರಣದ ವೇಳೆ ವ್ಯಾನ್ ಹಿಂದೆ ದ್ವಿಚಕ್ರ ವಾಹನವೂ ಕಾಣಿಸಿಕೊಂಡಿದೆ. ಪೊಲೀಸರು ಇತರ ಮನೆಗಳ ಹೊರಗಿನ ಸಿಸಿಟಿವಿ ದೃಶ್ಯಗಳನ್ನು ಸಹ ಪಡೆದುಕೊಂಡಿದ್ದು, ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button