ಕಾರ್ ಬಾಡಿಗೆ ಮಾಡಿಕೊಂಡು ಬಂದು ಚಾಲಕನ ದರೋಡೆಗೆ ಸಂಚು: ಚಾಲಕ ಕೂಗಿಕೊಳ್ಳುತ್ತಿದ್ದಂತೆ ಗದ್ದೆಯಲ್ಲಿ ಓಡಿಹೋದರು

ಪೊಲೀಸರ ಕಾರ್ಯಾಚರಣೆ: ಸಿಕ್ಕಿಬಿದ್ದ ಆರೋಪಿಗಳು

ಹೊನ್ನಾವರ: ಕಾರ್ ಬಾಡಿಗೆ ಮಾಡಿಕೊಂಡು ಬಂದು ಅವರು ದರೋಡೆಗೆ ಸಂಚು ರೂಪಿಸಿದ್ದರು. ಹೌದು, ಕಾರು ಬಾಡಿಗೆ ಮಾಡಿಕೊಂಡು ಬಂದು ಚಾಲಕನ ಹಲ್ಲೆ ಮಾಡಿ ಒಡಿ ಹೋಗುತ್ತಿದಂತೆ ಸಿಕ್ಕಿಬಿದ್ದ ಘಟನೆ ತಾಲೂಕಿನ ಹೊನ್ನಾವರ ಗುಣವಂತೆಯಲ್ಲಿ ನಡೆದಿದೆ. ಗುಲಬರ್ಗಾ ಜಿಲ್ಲೆಯ ಅಪಜಲ್ ಪುರದ ಸಂಗಮೇಶ ಹಾಗೂ ಇನ್ನಿತರರು ಸೇರಿ ಮಂಗಳೂರಿನ ಟ್ಯಾಕ್ಸಿ ಸ್ಟ್ಯಾಂಡನಲ್ಲಿ ಬಾಡಿಗೆಗಾಗಿ ನಿಲ್ಲಿಸಿಟ್ಟ ಅಬ್ದುಲ್ ರೆಹಮಾನ್ ಅವರ ಕಾರನ್ನು ಸುಬ್ರಮಣ್ಯಕ್ಕೆ ಹೋಗಲು ಬಾಡಿಗೆ ಮಾಡಿಕೊಂಡು ಬಂದಿದ್ದರು. ಸುಬ್ರಮಣ್ಯಕ್ಕೆ ಹೋಗದೆ ಮುರ್ಡೇಶ್ವರಕ್ಕೆ ಕಾರನ್ನು ಒಯ್ಯಲು ತಿಳಿಸಿದ್ದಾರೆ.

ಗಮನ ಬೇರೆಡೆ ಸೆಳೆದು ಒಂದುವರೆ ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಪ್ರಕರಣ: ಆರೋಪಿಯ ಬಂಧನ

ಈ ವೇಳೆ ಕಾರನ್ನು ಚಲಾಯಿಸಿಕೊಂಡು ಮುರ್ಡೇಶ್ವರ ದೇವಸ್ಥಾನದ ದ್ವಾರದ ಹತ್ತಿರ ಬಂದಾಗ, ಆರೋಪಿಗಳು ಮುರ್ಡೇಶ್ವರಕ್ಕೆ ಹೋಗುವದು ಬೇಡಾ ಹೈವೆ ಮೇಲೆ ಮುಂದೆ ಕರೆದುಕೊಂಡು ಹೋಗು ಎಂದು ಹೇಳಿದ್ದಾರೆ,. ಈ ವೇಳೆ ಚಾಲಕ ಕಾರಿಗೆ ಡಿಸೇಲ್ ಹಾಕಬೇಕು ಎಂದು ಹೇಳಿದಕ್ಕೆ, ಆರೋಪಿತರು ತಮ್ಮ ಹತ್ತಿರ ಹಣವಿಲ್ಲ ಮುಂದೆ ಎ.ಟಿ.ಎಮ್‌ನಿಂದ ತೆಗೆದು ಕೋಡುತ್ತೇನೆ ಎಂದು ತಿಳಿಸಿದ್ದಾರೆ.

ಗುಣವಂತೆ ಸಮೀಪ ಕಾರನ್ನು ಕದ್ದೋಯುವ ಉದ್ದೇಶದಿಂದ ಸಂಗಮೇಶ ಎಂಬುವ ವ್ಯಕ್ತಿ ಕಿಸೆಯಲ್ಲಿದ್ದ ಚಾಕುವನ್ನು ತೆಗೆದು ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ಹೆದರಿಸಿದ್ದಾಋಎ. ಚಾಲಕ ಕಾರಿನಿಂದ ಇಳಿಯದಿದ್ದಾಗ ಆರೋಪಿತರು ಕಾರಿನಿಂದ ದೂಡಿ ಹಾಕಿದ್ದಾರೆ. ಆರೋಪಿ ಸಂಗಮೇಶನು ಚಾಲಕನ ಕೈಯಲ್ಲಿದ್ದ ಕಾರಿನ ಚಾವಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಚಾಲಕನ ಕೂಗಿಕೊಂಡಾಗ ಕೂಗನ್ನು ಕೇಳಿ ಸಮೀಪದಲ್ಲಿರುವ ಸಾರ್ವಜನಿಕರು ಕಾರಿನ ಹತ್ತಿರ ಬರುವದನ್ನು ಗಮನಿಸಿದ ಖದೀಮರು ಗದ್ದೆ ಬಯಲಿನಲ್ಲಿ ಓಡಿ ಹೋಗಿದ್ದರು.

ತಕ್ಷಣ ಮಂಕಿ ಪೋಲಿಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದರು. ಸ್ಥಳಕ್ಕೆ ಮಂಕಿ ಪೊಲೀಸರು ಆಗಮಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ. ಈ ಕುರಿತು ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version