ಐ ಬಿ ಮಾರುತಿ ಅಕಾಲಿಕ ವಿಧಿವಶ; ಸರಳ ನಡೆ – ನುಡಿಯ ಯಕ್ಷ ಪ್ರೇಮಿ ಇನ್ನಿಲ್ಲ    

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಪರಿವೀಕ್ಷಣಾ ಮಂದಿರದ ಕ್ಯಾಂಟೀನ್ ನಡೆಸುತ್ತಾ ಕಡಿಮೆ ದರದಲ್ಲಿ ಗುಣಮಟ್ಟದ ಊಟ ಪೂರೈಸುತ್ತ ಐ ಬಿ ಮಾರುತಿ ಎಂದೇ ಪರಿಚಿತನಾಗಿದ್ದ ಹನುಮಟ್ಟಾದ ಮಾರುತಿ ಬೀರಪ್ಪ .ನಾಯ್ಕ (52 )ಅವರು ಗುರುವಾರ ಆಕಸ್ಮಿಕವಾಗಿ  ನಿಧನರಾದರು. ತಮ್ಮ ಸರಳ ನಡೆ ನುಡಿ ಮತ್ತು ಮೃದು ಸ್ವಭಾವದವರಾದ ಅವರು ತಮ್ಮ ಉದಾರ ಗುಣದಿಂದಲೂ ಹಲವರ ಪ್ರೀತಿ ವಿಶ್ವಾಸ ಗಳಿಸಿದ್ದರು..

Job News: ನಾಲ್ಕು ಹುದ್ದೆಗಳು ಖಾಲಿ ಇದೆ: ಇಂದೇ ಸಂಪರ್ಕಿಸಿ

ಯಕ್ಷಗಾನ ಕಲೆಯಲ್ಲಿ ಅಪಾರ ಅಭಿಮಾನ ಹೊಂದಿದ್ದ ಅವರು ತಾಲೂಕಿನ ಹಲವಾರು ಕಡೆಗಳಲ್ಲಿ ಯಕ್ಷಗಾನ ಸಂಘಟನೆ ನಡೆಸಿ ಕಲೆಗೆ ಪ್ರೋತ್ಸಾಹ ನೀಡಿದ್ದರಲ್ಲದೇ ತಮ್ಮ ಪುತ್ರನನ್ನು  ಯಕ್ಷಗಾನ ರಂಗದಲ್ಲಿ ತರಬೇತು ಗೊಳಿಸಿ  ಕಲಾವಿದನಾಗಿ ರೂಪಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದರು.  ಅವರ ಪುತ್ರ ಪುನೀತ ನಾಯ್ಕ ಈಗ ಒಬ್ಬ ಪ್ರತಿಭಾವಂತ ಯುವ ವೇಷದಾರಿಯಾಗಿ ಯಕ್ಷರಂಗದ ಅತಿರಥ ಮಹಾರಥರೊಂದಿಗೆ ಹೆಜ್ಜೆ ಹಾಕಿ  ತಮ್ಮ ಕುಣಿತದ ಮೂಲಕ ಅಂಕೋಲಾದ ಕೀರ್ತಿ ಹೆಚ್ಚಿಸುತ್ತಿದ್ದಾರೆ..

ಮಾರುತಿ ನಾಯ್ಕ ಅವರ ನಿಧನದ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ತಾಲೂಕಾ ಸರಕಾರಿ ಆಸ್ಪತ್ರೆ ಬಳಿ ಬಂದು ನೂರಾರು ಜನರು  ಅಂತಿಮ ದರ್ಶನ ಪಡೆದರು. ಮೃತ ಮಾರುತಿ ನಾಯ್ಕ ಅಂಕೋಲಾದ  ಗುತ್ತಿಗೆದಾರರರಾದ ಉಪೇಂದ್ರ ನಾಯ್ಕ , ನಾಗೇಶ ನಾಯ್ಕ ಇವರ ಸಹೋದರನಾಗಿದ್ದು ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version