Important
Trending

ನಸುಕಿನ ಜಾವ ರೈಲಿನಲ್ಲಿ ಮಹಿಳೆಯ ಬ್ಯಾಗ್ ಕದ್ದು 8 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನ| ಕಳ್ಳನನ್ನು ಹಿಡಿಯಲು ಹೋಗಿ ರೈಲಿನಿಂದ ಕೆಳಗೆ ಬಿದ್ದ ಮಹಿಳೆ

ಬೆಂಗಳೂರು ಕಾರವಾರ ರೈಲಿನಲ್ಲಿ ಘಟನೆ

ಕಾರವಾರ: ಚಲಿಸುತ್ತಿದ್ದ ರೈಲಿನಲ್ಲಿದ್ದ ಮಹಿಳೆಯೊಬ್ಬರ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್‌ನ್ನು ದುಷ್ಕರ್ಮಿಗಳು ಕದ್ದು ಪರಾರಿಯಾದ ಘಟನೆ ಬೆಂಗಳೂರು ಕಾರವಾರ ರೈಲಿನಲ್ಲಿ ನಡೆದಿದೆ. ಕಾರವಾರ ಮೂಲದ ಅಧ್ಯಾಪಕ ರಮೇಶ ಮತ್ತು ಅವರ ಪತ್ನಿ ಚಿನ್ನಾಭರಣ ಮತ್ತು ಹಣ ಕಳೆದುಕೊಂಡವರು ಎಂದು ತಿಳಿದುಬಂದಿದೆ.

ಅಂಗನವಾಡಿ ಕೇಂದ್ರದಲ್ಲಿ ಕಾಣಿಸಿ ಕೊಂಡು ನಾಗರ ಹಾವು|ಬುಸ್ ಬುಸ್ ಎನ್ನುತ್ತ ಹೆಡೆ ಎತ್ತಿ ರೋಷ ತೋರಿದ ನಾಗರ ಹಾವು

ಬೆಂಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದ ರೈಲಿನಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ರಾತ್ರಿ ವೇಳೆ ಪುತ್ತೂರು ರೈಲು ನಿಲ್ದಾಣ ಸಮೀಪ ಈ ಕಳ್ಳತ‌ನ ನಡೆದಿದೆ. ನಸುಕಿನ ಜಾವ ಮಹಿಳೆ ತನ್ನ ತಲೆಯ ಅಡಿಯಲ್ಲಿ ಇಟ್ಟುಕೊಂಡಿದ್ದ ವ್ಯಾನಿಟಿ ಬ್ಯಾಗ್‌ನ್ನು ಎಳೆಯಲು ಅಪರಿಚಿತರು ಯತ್ನಿಸಿದ್ದು, ಎಚ್ಚರವಾದ ಮಹಿಳೆ ಕೂಡಲೇ ಅಪರಿಚಿತರನ್ನು ತಳ್ಳಿದ್ದಾರೆ.

ಕಳ್ಳನನ್ನು ಹಿಡಿಯಲು ಹೋಗಿ ರೈಲಿನಿಂದ ಕೆಳಗೆ ಬಿದ್ದ ಮಹಿಳೆ

ಈ ವೇಳೆ ಮಹಿಳೆ‌ ಬಳಿ ಇದ್ದ ವ್ಯಾನಿಟಿ ಬ್ಯಾಗ್ ತುಂಡಾಗಿ ಚಿನ್ನಾಭರಣವಿದ್ದ ಬ್ಯಾಗು ಕಳ್ಳನ ಕೈ ಸೇರಿದೆ. ಈ ವೇಳೆ ಆತ ರೈಲಿನಿಂದ ಹಾರಿ ತಪ್ಪಿಸಿಕೊಂಡಿದ್ದಾನೆ. ಮಹಿಳೆ ಆತನನ್ನು ಹಿಡಿಯಲು ಮತ್ತು ರೈಲಿನ ಚೈನು ಎಳೆಯಲು ಪ್ರಯತ್ನಿಸಿದ್ದು,. ಆಯ ತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Related Articles

Back to top button