Follow Us On

Google News
Big NewsImportant
Trending

ಕಾವಲುಗಾರನ ಕಟ್ಟಿಹಾಕಿ ಸಹಕಾರಿ ಸಂಘದಲ್ಲಿ ಕಳ್ಳತನಕ್ಕೆ ಯತ್ನ: ಎರಡು ಕಬ್ಬಿಣದ ಕಪಾಟು ಕೊರೆದ ಕಳ್ಳರು: ಆದರೆ, ಆಗಿದ್ದೇನು?

ಆತಂಕದಲ್ಲಿ ಸೊಸೈಟಿಯತ್ತ ಆಗಮಿಸುತ್ತಿದ್ದಾರೆ ಬಂಗಾರ ಅಡವಿಟ್ಟ ಜನ

ಮುಂಡಗೋಡ: ವ್ಯವಸಾಯ ಸಹಕಾರಿ ಸಂಘವೊoದರ ಒಳಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ನಡೆದಿದೆ. ಆದರೆ, ಶತಪ್ರಯತ್ನ ಮಾಡಿಯಾದರೂ ಸೊಸೈಟಿ ದೋಚಬೇಕೆಂಬ ಅವರ ಆಸೆ ಈಡೇರಲಿಲ್ಲ. ಹೌದು, ತಾಲೂಕಿನ ಮಳಗಿ ಪಂಚಾಯತ್ ವ್ಯಾಪ್ತಿಯ ರೈತರು ವ್ಯವಹಾರ ನಡೆಸುವ ಸಹಕಾರಿ ಸಂಘದಲ್ಲಿ ರಾತ್ರಿ ಆರು ಜನ ಮುಸುಕುಧಾರಿ ಕಳ್ಳರ ತಂಡ ಕಾವಲುಗಾರ ಮಾದೇವಪ್ಪ ತಳವಾರ (72) ಎಂಬವರನ್ನು ಹೊಡೆದು ಕಟ್ಟಿ ಹಾಕಿ ಕಳ್ಳತನ ಮಾಡಲು ಯತ್ನಿಸಿದ್ದಾರೆ.

ಪವರ್ ಸ್ಟಾರ್ ಜೊತೆ ಹಾಟ್ ಸೀಟ್ ನಲ್ಲಿ ಕುಳಿತ ಗಣಪತಿ: ಗಮನಸೆಳೆದ ಕೋಟ್ಯಾಧಿಪತಿ ಕಾರ್ಯಕ್ರಮ ಮಾದರಿಯ ವಿನಾಯಕ

ಸೊಸೈಟಿಯ ಹಿಂಬದಿಯಿoದ ಒಳ ನುಗ್ಗಿರುವ ಕಳ್ಳರು ಗ್ಯಾಸ್ ಕಟ್ಟರ್ ನಿಂದ ಕಬ್ಬಿಣದ ಬಾಗಿಲು ಕಟ್ ಮಾಡಿದ್ದು, ನಂತರ ಕಬ್ಬಿಣದ ಕಪಾಟುಗಳನ್ನು ಕೊರೆದಿದ್ದಾರೆ. ಆದ್ರೆ, ಇವುಗಳಲ್ಲಿ ಯಾವುದೇ ಹಣ, ಬಂಗಾರ ಸಿಗಲಿಲ್ಲ ಎನ್ನಲಾಗಿದ್ದು, ಹೀಗಾಗಿ ಮತ್ತೊಂದು ಕಪಾಟನ್ನು ಕೊರೆಯಲು ಪ್ರಯತ್ನಿಸಿದ್ದು, ಈ ವೇಳೆ ಬೆಳಗಿನ ಜಾವ ನಾಲ್ಕುಗಂಟೆಯಾಗಿದ್ದು, ಅಲ್ಲಿಂದ ಪರಾರಿಯಾಗಿದ್ದಾರೆ. ಕಳ್ಳತನದ ಸುದ್ದಿ ತಿಳಿದು ಬಂಗಾರ ಅಡವಿಟ್ಟ ಜನರು ಸೊಸೈಟಿಯತ್ತ ಆಗಮಿಸುತ್ತಿದ್ದಾರೆ. ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸಿದೆ.

ಆದರೆ, ಕಳ್ಳರು ಎರಡು ಕಬ್ಬಿಣದ ಕಪಾಟುಗಳನ್ನು ಕೊರೆದಿದ್ದು, ಮೂರನೇ ಕಪಾಟಿನಲ್ಲಿ ಅಪಾರ ಪ್ರಮಾಣದ ಹಣವಿತ್ತು ಎನ್ನಲಾಗಿದೆ. ಇದನ್ನು ಕಳ್ಳತ ಮಾಡಲು ದುಷ್ಕರ್ಮಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸೊಸೈಟಿಯಲ್ಲಿ ಎಲ್ಲ ಒಡವೆ ಮತ್ತು ಹಣಗಳು ಭದ್ರವಾಗಿವೆ ಎನ್ನಲಾಗಿದೆ. ಈ ಹಿಂದೆಯೂ ಕೂಡಾ ಎರಡು ಬಾರಿ ಇದೇ ಸೊಸೈಟಿಯ ಕಳ್ಳತನಕ್ಕೆ ಯತ್ನಿಸಲಾಗಿತ್ತು.

ವಿಸ್ಮಯ ನ್ಯೂಸ್, ಕಾರವಾರ

Back to top button
Idagunji Mahaganapati Chandavar Hanuman