Important
Trending

ಖಾಲಿ ಬಾಟಲಿಗಳು ತುಂಬಿದ್ದ ಲಾರಿಯಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ : ಆರೋಪಿಯ ಬಂಧನ

ಕಾರವಾರ: ಖಾಲಿ ಬಾಟಲಿಗಳು ತುಂಬಿದ್ದ ಲಾರಿಯಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ ಘಟನೆ ಮಾಜಾಳಿ ಬಳಿ ನಡೆದಿದೆ. ಈ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಗೋವಾದಿಂದ ಕರ್ನಾಟಕದತ್ತ ಆಗಮಿಸುತ್ತಿದ್ದ ಲಾರಿಯನ್ನು ತಡೆದು ತಪಾಸಣೆ ನಡೆಸಿದ ವೇಳೆ, ಅಕ್ರಮ ಬಯಲಿಗೆ ಬಂದಿದೆ.

ಗದ್ದೆಗೆ ತೆರಳಿದ್ದಾಗ ದಿಡೀರ್ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಹಿನ್ನಲೆ ಗಾಯಕ

ತೆಲoಗಾಣ ರಾಜ್ಯದ ವಾರಂಗಲ್ ನಿವಾಸಿ ಬನುಪಟಿ ಜಗನ್ ಮೋಹನ್ ರಾಮನ್ ಪೆಟ್ ಎಂಬಾತ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ದಾಳಿ ವೇಳೆ ಸುಮಾರು ಆರುವರೆ ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button