Focus NewsImportant
Trending

ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ: ಕೊನೆಗೆ ತಾನೂ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ

ಕ್ಷುಲ್ಲಕ ಜಗಳ ಮಾಡಿಕೊಂಡು ಹೆಂಡತಿಯ ಜೀವವನ್ನೇ ತೆಗೆಯಲು ಯತ್ನ

ಸಿದ್ದಾಪುರ : ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ತಾನು ಸಹ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟ ಘಟನೆ ತಾಲೂಕಿನ ಕಾನಗೋಡ ಗ್ರಾಮದ ಗಣೇಶ ನಗರದಲ್ಲಿ ನಡೆದಿದೆ. ಗುತ್ಯ ಸಣ್ಯಾ ಚೆನ್ನಯ್ಯ ( 50 ) ಎನ್ನುವವನು ಗುರುವಾರ ತನ್ನ ಹೆಂಡತಿಯಾದ ರೇಣುಕಾ ಗುತ್ಯಾ ಚನ್ನಯ್ಯ (45 ) ಇವಳೊಂದಿಗೆ ಜಗಳ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಕಂದಕ: ಬಾಯ್ತೆರೆದು ಅಪಾಯಕ್ಕೆ ಕಾದಿರುವ ರಸ್ತೆ: ವಾಹನ ಸವಾರರಿಗೆ ಎಚ್ಚರಿಕೆ 

ಸಿದ್ದಾಪುರ ಪೊಲೀಸ್ ಠಾಣೆ

ಈ ವೇಳೆ ಆಕೆಯ ಕೈಕಾಲು ತೀವ್ರತರವಾಗಿ ಸುಟ್ಟು ಗಾಯವಾಗಿದ್ದು ವಿಷಯ ತಿಳಿದ 108 ವಾಹನದವರು ಸಿದ್ದಾಪುರ ಸರ್ಕಾರಿ ದವಾಖಾನೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ರೇಣುಕಾ ಇವಳನ್ನು ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಒಯ್ಯುತ್ತಿದ್ದಂತೆ ತಾನು ಸಹ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ಸ್ಥಳೀಯರು ಖಾಸಗಿ ವಾಹನದ ಮೂಲಕ ಈತನನ್ನು ಸಹ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುತ್ತಾರೆ. ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಹಿನ್ನಲೆಯಲ್ಲಿ ಹೆಂಡತಿಯ ಸ್ಥಿತಿ ಗಂಭೀರವಾಗಿದೆ ಎ‌ನ್ನಲಾಗಿದೆ. ಘಟನೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ‌,‌ಸಿದ್ದಾಪುರ

Related Articles

Back to top button