Important
Trending

ಜಲಪಾತದಲ್ಲಿ ಕಾಲುಜಾರಿಬಿದ್ದು ಮೃತಪಟ್ಟ ವ್ಯಕ್ತಿಯ ಶವಪತ್ತೆ: ಸ್ಥಳೀಯರಿಗೆ ಪೊಲೀಸರು ಅಭಿನಂದನೆ

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಹುಂಡಿ ಗದ್ದೆ ಜಲಪಾತದಲ್ಲಿ ಶನಿವಾರ ಕಾಲುಜಾರಿ ಬಿದ್ದು ಪ್ರವಾಸಿಗ ನಾಪತ್ತೆಯಾಗಿದ್ದು, ಸಿದ್ದಾಪುರ ಪೊಲೀಸರು, ಸ್ಥಳೀಯರು ಅಗ್ನಿಶಾಮಕದವರು ಸುರಿಯುವ ಮಳೆಯಲ್ಲಿಯೂ ಶೋಧ ಕಾರ್ಯನಡೆಸಿದ್ದು, ರವಿವಾರ ಸಿದ್ದಾಪುರ ಕುಮಟಾ ಗಡಿ ಭಾಗದ ಪ್ರದೇಶದಲ್ಲಿ ಪ್ರವಾಸಿಗನ ಮೃತದೇಹ ಪತ್ತೆಹಚ್ಚಿದ್ದಾರೆ.

ಜೂನಿಯರ್ ನರೇಂದ್ರ ಮೋದಿ: ನೋಡೋಕೆ ಸೇಮ್ ಮೋದಿಯಂತೆ ಕಾಣ್ತಾರೆ ಇವರು!

ಸಿದ್ದಾಪುರ ತಾಲೂಕಿನ ಹುಕ್ಕಳಿ ಗ್ರಾಮದ ಹುಂಡಿಗದ್ದೆ ಜಲಪಾತ ವೀಕ್ಷಣೆಗೆ ಮೈಸೂರು, ಬೆಂಗಳೂರು, ಕೋಲಾರ ಮೂಲದ ಒಟ್ಟು 13 ಜನ ಪ್ರವಾಸಿಗರು ಬಂದಿದ್ದರು. ಅದರಲ್ಲಿ ಕೋಲಾರ ಜಿಲ್ಲೆಯ ಮುದುವತ್ತಿ ಗ್ರಾಮ, ಮೂಲದ 32 ವರ್ಷದ ರಾಘವೇಂದ್ರ ವೆಂಕಟೇಶಪ್ಪ ಗೌಡ ಜಲಪಾತದಲ್ಲಿ ಕಾಲುಜಾರಿ ಬಿದ್ದು ನಾಪತ್ತೆಯಾಗಿದ್ದ. ರವಿವಾರ ಮೃತದೇಹ ಪತ್ತೆಯಾಗಿದ್ದು, ಕುಮಟಾ ಪೊಲೀಸರಿಗೆ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಕಾರ್ಯಾಚರಣೆಗೆ ಸಹಕರಿಸಿದ ಸ್ಥಳೀಯರಿಗೆ ಪೊಲೀಸರು ಅಭಿನಂದನೆ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button