Important
Trending

ಮನೆಯ ಗೋಡೆ ಕುಸಿತ: ಮಣ್ಣಿನಡಿ ಸಿಲುಕಿ ಯುವಕ ಸಾವು

ಸಿದ್ದಾಪುರ: ಉತ್ತರಕನ್ನಡದಲ್ಲಿ ಸುರಿದ ಭಾರೀ ಮಲೆ ಹಲವೆಡೆ ಅವಾಂತರ ಸೃಷ್ಟಿಮಾಡಿದೆ. ಹೌದು, ಭಾರಿ ಗಾಳಿ ಮಳೆಗೆ ಮನೆಯ ಗೋಡೆ ಕುಸಿದು ಯುವಕ ಮೃತ ಪಟ್ಟ ಘಟನೆ ತಾಲೂಕಿನ ಕ್ಯಾದಗಿಯಲ್ಲಿ ನಡೆದಿದೆ. ಚಂದ್ರಶೇಖರ ನಾರಾಯಣ ಹಸ್ಲರ ( 21) ಮೃತ ದುರ್ದೈವಿ. ರವಿವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ದುರ್ಘಟನೆ ಸಂಭವಿಸಿದೆ.

ಜೂನಿಯರ್ ನರೇಂದ್ರ ಮೋದಿ: ನೋಡೋಕೆ ಸೇಮ್ ಮೋದಿಯಂತೆ ಕಾಣ್ತಾರೆ ಇವರು!

ಮನೆ ಕುಸಿದ ವೇಳೆ ಗೋಡೆ ಅಡಿ ಸಿಲುಕಿದ್ದವನನ್ನು ಹೊರತೆಗೆದು ಸರಕಾರಿ ಆಸ್ಪತ್ರೆ ಸಿದ್ದಾಪುರಕ್ಕೆ ಚಿಕಿತ್ಸೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗಾ ಮೆಗ್ಗನ್ ಆಸ್ಪತ್ರೆಯಿಂದ ಮಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುವವುದಾಗಿ ತಿಳಿದು ಬಂದಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Related Articles

Back to top button