Follow Us On

WhatsApp Group
Focus NewsImportant
Trending

ವಿಮಾ ಏಜೆಂಟರ ನೇರ ನೇಮಕಾತಿ: ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಶಿರಸಿ: ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆಯ ಏಜೆಂಟ್‌ಗಳ ಸಂದರ್ಶನ ಕ್ಕಾಗಿ ನೇರ ನೇಮಕಾತಿ ನಡೆಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ 18 ರಿಂದ 50 ವರ್ಷ ವಯೋಮಿತಿಯೊಳಗಿನ ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ಅರ್ಹರು, ತಮ್ಮ ಸ್ವವಿವರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ(ಇದ್ದಲ್ಲಿ ಮಾತ್ರ) ಸೆಪ್ಟೆಂಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಹೊಸ ಮಾರುಕಟ್ಟೆ ಆವರಣದಲ್ಲಿರುವ ಶಿರಸಿ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಹಾಜರಿರಬೇಕೆಂದು ಕೋರಲಾಗಿದೆ.

ಹೆಂಡತಿ ಖಾತೆಗೆ 2.69 ಕೋಟಿ ವರ್ಗಾವಣೆ ಮಾಡಿ ನಾಪತ್ತೆಯಾದ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ: ಗಮನಕ್ಕೆ ಬಾರದಂತೆ ಸಿಬ್ಬಂದಿಯ ಲಾಗಿನ್ ಐಡಿ ತೆಗೆದುಕೊಂಡು ಮೋಸ

ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿತ ವೇತನ ಇರುವುದಿಲ್ಲ. ಸಂಗ್ರಹಿಸಿದ ಪಾಲಿಸಿಗಳ ಮೇಲೆ ಕಮೀಷನ್ ನೀಡಲಾಗುವುದು. ಬೇರೆ ಯಾವುದೇ ವಿಮಾ ಕಂಪನಿ/ಸoಸ್ಥೆ/ಸoಘಗಳ ಏಜೆಂಟ್ ಆಗಿರಬಾರದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08384-236231ಗೆ ಸಂಪರ್ಕಿಸಬಹುದಾಗಿದೆ ಎಂದು ಶಿರಸಿ ವಿಭಾಗದ ಅಂಚೆ ಅಧೀಕ್ಷಕ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button