Focus News
Trending

ಉತ್ತರಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ : ಪದ್ಮಶ್ರೀ ಸುಕ್ರಿ ಗೌಡರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಕೆ: ಮಹಿಳಾ ಹಾಸ್ಟೆಲ್ ಗೂ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ

ಅಂಕೋಲಾ: ಉತ್ತರಕನ್ನಡ ಜಿಲ್ಲಾ ಪ್ರವಾಸದಲ್ಲಿರುವ  ರಾಜ್ಯ  ಮಹಿಳಾ ಆಯೋಗದ ಅಧ್ಯಕ್ಷೆ  ಆರ್‌.ಪ್ರಮೀಳಾ ನಾಯ್ಡು ಅವರು ಪದ್ಮಶ್ರೀ ಪುರಸ್ಕೃತ ಬಡಗೇರಿಯ ಸುಕ್ರಿ ಗೌಡ ಮತ್ತು ಪಟ್ಟಣದಲ್ಲಿ ಕೆ.ಎಲ್.ಇ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಕ್ಕೆ ಭೇಟಿ ನೀಡಿದರು. ಕಾರವಾರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಹಿಳಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಸಂಜೆ ಅಂಕೋಲಾಕ್ಕೆ ಆಗಮಿಸಿದ್ದರು. ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಗೌಡರ ಬಡಗೇರಿಯ ನಿವಾಸಕ್ಕೆ ಭೇಟಿ ನೀಡಿ ಸುಕ್ರಿ ಗೌಡರನ್ನು ಸನ್ಮಾನಿಸಿ ಕೆಲ ಹೊತ್ತು ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆದರು.

ರೈಲ್ವೆ ಸುರಂಗ ಮಾರ್ಗದಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ: ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ

ಈ ಸಂದರ್ಭದಲ್ಲಿ ವಿಸ್ಮಯ ವಾಹಿನಿಯೊಂದಿಗೆ ಮಾತನಾಡಿದ ಅವರು ಸುಕ್ರಿ ಗೌಡರನ್ನು ಒಮ್ಮೆ ಭೇಟಿ ಮಾಡಬೇಕೆನ್ನುವ ಅಭಿಲಾಷೆ ಇತ್ತು. ಆ ಅವಕಾಶ ಇಂದು ಒದಗಿ ಬಂದಿದೆ, ಸುಕ್ರಿ ಗೌಡರನ್ನು ಕಂಡು ಅವರ ಆಶೀರ್ವಾದ ಪಡೆದದ್ದು ತುಂಬ ಸಂತೋಷವಾಯಿತು. ಹಾಲಕ್ಕಿ ಸಮಾಜದ ಜನಪದ ಸಂಸ್ಕೃತಿಯ ಪ್ರತಿಬಿಂಬದಂತಿರುವ ಹಿರಿಯ ಮಹಿಳೆ ಸುಕ್ರಿ ಗೌಡ ಅವರು ಪಡೆದ ಪ್ರಶಸ್ತಿ, ಸನ್ಮಾನ, ಗೌರವಗಳನ್ನು ನೋಡಿದರೆ ಮಹಿಳಾ ಸಮಾಜಕ್ಕೆ ತುಂಬ ಹೆಮ್ಮೆಯಾಗುತ್ತದೆ. ಇಂಥವರು ಕೇವಲ ಅಂಕೋಲಾಕ್ಕೆ ಅಷ್ಟೇ ಅಲ್ಲದೇ ನಮ್ಮ ರಾಜ್ಯಕ್ಕೇ ಒಂದು ದೊಡ್ಡ ಆಸ್ತಿ ಎಂದರು. ಪದ್ಮಶ್ರೀ ಸುಕ್ರಿ ಗೌಡರು ತಮ್ಮ ಮನೆಗೆ ಆಗಮಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡುರವರೊಂದಿಗೆ ತುಂಬ ಆತ್ಮೀಯವಾಗಿ ಮಾತನಾಡಿ ಅವರಿಗಾಗಿ ಜಾನಪದ ಗೀತೆಯೊಂದನ್ನು ಹಾಡಿದರು.

.ಸ್ಥಳೀಯ ಪ್ರಮುಖ ಸಾತು ಗೌಡ ವಂದಿಸಿದರು.ಸುಕ್ರಜ್ಜಿ ಕುಟುಂಬದವರು, ಊರವರುಉಪಸ್ಥಿತರಿದ್ದರು ಈ ವೇಳೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರದ ಉಪ ನಿರ್ದೇಶಕರಾದ ಶಾಮಲಾ ಸಿ.ಕೆ, ಮಹಿಳಾ ಮತ್ತು‌ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ವಿ.ಎಚ್.ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋನಲ ಐಗಳ,   ಕಾರ್ಮಿಕ ಇಲಾಖೆ ಉಪ ನಿರ್ದೇಶಕ ಅಕ್ಬರ ಮುಲ್ಲಾ, ಅಂಕೋಲಾದ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸವಿತಾ ಶಾಸ್ತ್ರಿಮಠ, ಸುಪರವೈಸರ್ ಸುರೇಖಾ ನಾಯ್ಕ,  ಸಂದೇಶ ನಾಯಕ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. 

ನಂತರ ಪಟ್ಟಣದ ಕೆ.ಎಲ್.ಇ ಸಂಸ್ಥೆಯ    ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ವಸತಿ ನಿಲಯದ ಮಹಿಳೆಯರೊಂದಿಗೆ ಸಂವಾದ ನಡೆಸಿದರು.  ಕೆ.ಎಲ್‌.ಇ ಸಂಸ್ಥೆಯ ಮಿನಲ್ ನಾರ್ವೇಕರ ಅವರೊಂದಿಗೆ ಚರ್ಚೆ ನಡೆಸಿ ವಸತಿ ನಿಲಯದ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಹಾಗೂ ಉದ್ಯೋಗಸ್ಥ ಮಹಿಳೆಯರೊಂದಿಗೆ ಸಂವಾದ ನಡೆಸಿ ಉದ್ಯೋಗ ಮಾಡುವ ಸ್ಥಳದಲ್ಲಿ ಏನಾದರೂ ಮಾನಸಿಕ ಕಿರುಕುಳ, ಲೈಂಗಿಕ ಕಿರುಕುಳ ಆದ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು, ಯಾರಲ್ಲಿ ದೂರು ನೀಡಬೇಕು ಹೇಗೆ ದೂರು ನೀಡಬರೆಕು ಎನ್ನುವದರ ಬಗ್ಗೆ ಮಾಹಿತಿ ನೀಡಿದರು.ಹಾಸ್ಟೆಲ್ ನಲ್ಲಿ ಮಹಿಳೆಯರಿಗಿರುವ  ಹೆಚ್ಚಿನ ಭದ್ರತೆ  ಇದ್ದು ಈ ಕುರಿತು ನಮಗೆಲ್ಲಾ ಸಂತೃಪ್ತಿ ಇದೆ ಎಂದು ವಸತಿ ನಿಲಯದಲ್ಲಿ ಇರುವ ಹಾವೇರಿ ಜಿಲ್ಲೆಯ ಶಿಗ್ಗಾವಿ ಮೂಲದ ಹಿರಿಯ ಮಹಿಳೆಯೊಬ್ಬರು ಮಹಿಳಾ ಆಯೋಗದ ಅಧ್ಯಕ್ಷರಿಗೆ ತಿಳಿಸಿದರು.

ಅಂಕೋಲಾ, ಕುಮಟಾ, ಹೊನ್ನಾವರ, ಹಳಿಯಾಳ ಸೇರಿದಂತೆ ಉಕ ಜಿಲ್ಲೆಯವರು,ವಿಜಯನಗರ ಸೇರಿದಂತೆ ಇತರೆ ಜಿಲ್ಲೆಯವರು,ತೆಲಂಗಾಣ ಸೇರಿದಂತೆ ಹೊರ ರಾಜ್ಯದವರು ಸಹ ಇಲ್ಲಿ ವಾಸವಿದ್ದು,ಅವರೆಲ್ಲರನ್ನು ಮಾತನಾಡಿಸಿದ ಮಹಿಳಾ ಆಯೋಗದ ಅಧ್ಯಕ್ಷರು ವಸತಿ ವ್ಯವಸ್ಥೆ ಮತ್ತಿತ್ತರ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.ನಂತರ ಕಾರವಾರಕ್ಕೆ ತೆರಳಿದರು.ಸೆಪ್ಟೆಂಬರ್ 14ರ ಬುಧವಾರ ಜಿಲ್ಲಾ ಕೇಂದ್ರ ಕಾರವಾರ ಸೇರಿದಂತೆ,ಕೈಗಾ ಮತ್ತಿತರ ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಅಂಕೋಲಾ ಠಾಣೆಯ ಪಿಎಸ್ ಐ ಮಾಲಿನಿ ಹಾಸಬಾವಿ, ಸಿಬ್ಬಂದಿಗಳಾದ ನಯನಾ ನಾಯ್ಕ, ಸುರೇಶ ಬಳ್ಳುಳ್ಳಿ ಇತರರು ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button