ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಲಯನ್ಸ್ ಕ್ಲಬ್, ಕುಮಟಾ ರವರ ಸಂಯುಕ್ತ ಆಶ್ರಯದಲ್ಲಿ ಹಿಂದಿ ದಿವಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಿಂದಿ ದಿವಸದ ನಿಮಿತ್ತ ಹಲವಾರು ಸ್ಪರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಲಾಗಿತ್ತು. ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ವಿಷ್ಣು ಪಟಗಾರ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿ ಭಾಷೆ ನಮ್ಮ ದೇಶದ ಜನಸಂಖ್ಯೆಯ ಬಹುಪಾಲು ಜನರು ಮಾತನಾಡುವ ಭಾಷೆ. ಹಿಂದಿಯನ್ನು ನಮ್ಮ ರಾಷ್ಟ್ರೀಯ ಭಾಷೆ ಎಂದು ಸರ್ಕಾರ ಘೋಷಣೆ ಮಾಡಬೇಕು. ಹಿಂದಿಯನ್ನು ಹೆಚ್ಚು ಪ್ರಚುರ ಪಡಿಸಲು ಕೇಂದ್ರ ಸರ್ಕಾರ ಅದಕ್ಕೆ ರಾಜಭಾಷೆಯ ಸ್ಥಾನ ನೀಡಿ ಹಿಂದಿ ದಿವಸ, ಹಿಂದಿ ಸಪ್ತಾಹ ಮುಂತಾದ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ. ಇದಲ್ಲದೆ ಹಿಂದಿ ಪ್ರಚಾರ ಪರಿಷತ್ ಮುಂತಾದ ಆಯೋಗಗಳನ್ನು ರಚಿಸಿ ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿ ಭಾಷೆಯ ಪ್ರಚಾರಕ್ಕೆ ಇವುಗಳನ್ನು ಬಳಸುತ್ತಿದೆ. ಹಿಂದಿಯನ್ನು ಕಲಿತರೆ ಉತ್ತರ ಮತ್ತು ದಕ್ಷಿಣ ಬಾರತದಲ್ಲಿವ್ಯವಹರಿಸಲು ತುಂಬಾ ಸುಲಭ ಎಂದರು.
ಮಕ್ಕಳ ಕಳ್ಳರು ಬಂದಿರುವುದು ನಿಜನಾ? ಅಸಲಿ ಸುದ್ದಿ ಏನು? ತುರ್ತು ಸಂದರ್ಭಗಳಲ್ಲಿ 112 ಕ್ಕೆ ಕರೆ ಮಾಡಿ
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶೆಟ್ ರವರು ಮಾತನಾಡಿ ಹಿಂದಿ ಸರಳ ಭಾಷೆ, ನಾನು ಕೂಡ ಅಗತ್ಯ ಸಂದರ್ಭದಲ್ಲಿ ಹಿಂದಿಯಲ್ಲೇ ವ್ಯವಹರಿಸುತ್ತೇನೆ, ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಎಲ್ಲಾ ಶಿಕ್ಷಕ ಸಿಬ್ಬಂದಿಗಳು ಇಂದು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆ ಜೊತೆಗೆ ಹಿಂದಿ ಭಾಷೆ ಕಲಿಕೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಭಾಗವಹಿಸುವಂತೆ ಮಕ್ಕಳನ್ನು ಪ್ರೇರೇಪಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಲಯನ್ಸ್ ಕ್ಲಬ್ ಉಪಾಧ್ಯಕ್ಷರಾದ ಡಾ|| ನಾಗರಾಜ್ ಭಟ್ಟರವರು ನಮ್ಮ ದೇಶದಲ್ಲಿ ಹಿಂದಿ ಭಾಷೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಂ. ಗೋನೆ ಹಳ್ಳಿಯವರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಶ್ರೀ ಎಂ ಜಿ ಹಿರೇಕುಡಿಯುವರು ಹಿಂದಿ ದಿವಸದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಹಿಂದಿ ಭಾಷೆಯನ್ನು ಉಳಿಸಿ-ಬೆಳೆಸಿ ಸಮೃದ್ಧ ಗೊಳಿಸುವಲ್ಲಿ ಭಾರತೀಯರಾದ ನಮ್ಮ ನಿಮ್ಮೆಲ್ಲರ ಪಾತ್ರ ಹಿರಿದಾಗಿರುತ್ತದೆ. ಹಿಂದಿ ಭಾಷೆಯು ಅತ್ಯಂತ ಸುಂದರ ಸರಳ ಹಾಗೂ ಅರ್ಥೈಸಲು ಸುಲಭ, ಚಿಕ್ಕ ಮಕ್ಕಳು ಸಹ ಇದನ್ನು ಸರಾಗವಾಗಿ ಮಾತನಾಡಬಲ್ಲರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜಿಎಸ್ ಶಾಲೆಯ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸೌಭಾಗ್ಯ ಬಾಳೇರಿಯವರು ಮಕ್ಕಳು ತಮ್ಮದೇ ಆದ ಚಿಕ್ಕಪುಟ್ಟ ಕವನವನ್ನು ಲೇಖನವನ್ನು ಹಿಂದಿಯಲ್ಲಿ ಬರೆದು ಪ್ರಕಟಿಸಬೇಕು. ಹಿಂದಿ ಹಿಂದೂಸ್ಥಾನ ದ ರಾಷ್ಟ್ರಭಾಷೆ ಯಾಗಿ ಮೆರೆಯಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲೆಯ ಮುದ್ದು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ರೋಶನಿ ಸಂಗಡಿಗರು ಪ್ರಾರ್ಥಿಸಿದರು. ಕುಮಾರ ಕಾರ್ತಿಕ್ ಕಾರಂತ್ ನಿರೂಪಿಸಿದನು. ಕುಮಾರಿ ಧೃತಿ ಹೆಗಡೆ ಸ್ವಾಗತಿಸಿದಳು.
ಕುಮಾರಿ ಸಮೀಕ್ಷಾ ಜೈನ್ ವಂದಿಸಿದಳು, ಕುಮಾರ ಅಕ್ಷಯ್ ಪಟಗಾರ ಹಿಂದಿ ಭಾಷೆಯ ಇತಿಹಾಸದ ಬಗ್ಗೆ ಭಾಷಣ ಮಾಡಿದನು, ಶರಣ್ಯ ಭಾಗವತ್ ಸಹಕರಿಸಿದಳು. ಈ ಸಂದರ್ಭದಲ್ಲಿ ಶಾಲೆಯ ಹಿಂದಿ ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು. ಹಿಂದಿ ಭಾಷೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನದ ಪ್ರಾಯೋಜಕರಾದ ಶ್ರೀ ವಿಷ್ಣು ಪಟಗಾರ ರವರು ಹಿಂದಿಯನ್ನು ಪ್ರೀತಿಸಿ, ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.
ವಿಸ್ಮಯ ನ್ಯೂಸ್, ಕುಮಟಾ