Focus News
Trending

ಹಿರೇಗುತ್ತಿ ಹೈಸ್ಕೂಲ್ ಕಬ್ಬಡ್ಡಿಯಲ್ಲಿ ಚಾಂಪಿಯನ್ ಆಗಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಕುಮಟಾ: 2022ನೇ ಸಾಲಿನ ಎ.ವಿ ಬಾಳಿಗಾ ಕುಮಟಾ ಕ್ರೀಡಾಂಗಣದಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಗುಂಪು ವಿಭಾಗದಲ್ಲಿ ಬಾಲಕರ ಕಬಡ್ಡಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಯೋಗಾಸನ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಕುಮಾರ ರೋಹಿತ ಸಿಣ್ಣ ಅಂಬಿಗ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು

ಹಿಂದಿನಿoದಲೂ ಹಿರೇಗುತ್ತಿ ಊರು ಕಬಡ್ಡಿ ಆಟದಲ್ಲಿ ಗಂಡುಮೆಟ್ಟಿದ ನೆಲೆಯಾಗಿದೆ, ಈ ಮೊದಲು ಹಿರೇಗುತ್ತಿ ಹೈಸ್ಕೂಲ್ ಕ್ರೀಡೆಯಲ್ಲಿ ದೈಹಿಕ ಶಿಕ್ಷಕರಾದ ನಾಗರಾಜ ನಾಯಕರ ಮಾರ್ಗದರ್ಶನದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಾ ಬಂದಿದೆ.
ಕಬಡ್ಡಿ ತಂಡದ ಆಟಗಾರರಾದ ಸಂಜಯ ಗಣಪತಿ ಹಳ್ಳೇರ, ಗಣೇಶ ಮಂಜುನಾಥ ಹಳ್ಳೇರ, ಸುಜನ ನಾಗಪ್ಪ ಅಂಬಿಗ, ಗಿರೀಶ ರಮೇಶ ಹಳ್ಳೇರ, ಗಜಾನನ ಹೊಲಿಯಪ್ಪ ಹಳ್ಳೇರ, ಅಕ್ಷಯ ಗಣಪತಿ ಹಳ್ಳೇರ, ಮಹೇಶ ಮಾದೇವ ಹಳ್ಳೇರ, ಇಂದ್ರ ಗಣಪತಿ ಹಳ್ಳೇರ, ಯೋಗೇಶ ಭಗೀರಥ ಹಳ್ಳೇರ, ನಾಗರಾಜ ನಾರಾಯಣ ಹಳ್ಳೇರ, ಗಣೇಶ ಹೊಲಿಯಪ್ಪ ಹಳ್ಳೇರ, ಶಿವರಾಜ ಲಿಂಗಪ್ಪ ಹಳ್ಳೇರ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಶ್ರೀ ನಾಗರಾಜ ನಾಯಕರವರನ್ನು ಟೀಮ್ ಮ್ಯಾನೇಜರ್ ಶ್ರೀ ವಿಶ್ವನಾಥ ಬೇವಿನಕಟ್ಟಿ ಹಾಗೂ ಶಿಕ್ಷಕ ವೃಂದದವರನ್ನು ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ, ಉಪಾಧ್ಯಕ್ಷ ಶ್ರೀ ಶ್ರೀಕಾಂತ ನಾಯಕ ಕಾರ್ಯದರ್ಶಿ ಶ್ರೀ ಮೋಹನ ಬಿ ಕೆರೆಮನೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕ ಶ್ರೀ ರೋಹಿದಾಸ ಎಸ್ ಗಾಂವಕರ ಮತ್ತು ಗ್ರಾಮ ಮಂಚಾಯತ ಹಿರೇಗುತ್ತಿ ಅಧ್ಯಕ್ಷರು ನಾಗರತ್ನ ಗಾಂವಕರ, ಉಪಾಧ್ಯಕ್ಷ ಶಾಂತಾ ಎನ್ ನಾಯಕ ಹಾಗೂ ಸದಸ್ಯರು, ಆಶ್ರಯ ಪೌಂಡೇಶನ್ ರಾಜೀವ ಗಾಂವಕರ, ಬ್ರಹ್ಮ ಜಟಕ ಯುವಕ ಸಂಘ ಅಧ್ಯಕ್ಷರಾದ ಜಗದೀಶ(ಪಪ್ಪು)ನಾಯಕ, ಕಾರ್ಯದರ್ಶಿ ಗುರುರಾಜ ನಾಯಕ ಮತ್ತು ಸದಸ್ಯರು ಹಾಗೂ ಊರಿನ ನಾಗರಿಕರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button