ಯಲ್ಲಾಪುರ: ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಬ್ಯಾಂಕ್ ಆಫ್ ಬರೋಡಾದಲ್ಲಿ 2.69 ಕೋಟಿ ರೂಪಾಯಿ ವಂಚಿಸಿದ್ದ ಬ್ಯಾಂಕ್ ಶಾಖೆಯ ಸಹಾಯಕ ವ್ಯವಸ್ಥಾಪಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು, ಬ್ಯಾಂಕ್ ಸಿಬ್ಬಂದಿಯ ಲಾಗಿನ್ ಐಡಿಯನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು ಶಾಖೆಯ ಸಹಾಯಕ ವ್ಯವಸ್ಥಾಪಕನೇ ಬ್ಯಾಂಕಿನ ಖಾತೆಯಿಂದ ಪತ್ನಿಯ ಖಾತೆಗೆ 2.69 ಕೋಟಿ ರೂ ಹಣ ವರ್ಗಾವಣೆ ಮಾಡಿ ಬ್ಯಾಂಕ್ ಗೆ ಮೋಸ ಮಾಡಿದ ಘಟನೆ ನಡೆದಿತ್ತು. ಹುಬ್ಬಳ್ಳಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಸಿದ್ಧ ಪ್ರವಾಸಿತಾಣ ಮುರ್ಡೇಶ್ವರದ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ: ಇಬ್ಬರ ಬಂಧನ: ಪರಾರಿಯಾದ ಓರ್ವ ಆರೋಪಿ
ಆನ್‌ಲೈನ್ ಗೇಮ್ ಆಡುವ ಚಟಕ್ಕೆ ಬಿದ್ದಿದ್ದ ಸಹಾಯಕ ವ್ಯವಸ್ಥಾಪಕ
ಸಿಬ್ಬಂದಿಗಳ ಲಾಗಿನ್ ದುರುಪಯೋಗಪಡಿಸಿಕೊಂಡು, ಅವರ ಅರಿವಿಗೇ ಬಾರದಂತೆ ಏಪ್ರಿಲ್ ನಿಂದ ಸೆಪ್ಟೆಂಬರ್ 5 ರವರೆಗೆ ಬ್ಯಾಂಕ್ ಆಫ್ ಬರೋಡಾದ ಅಕೌಂಟ್ ನಿಂದ ತನ್ನ ಹೆಂಡತಿಯ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಕುಮಾರ್ ಕೃಷ್ಣಮೂರ್ತಿ ಬೋನಾಲ್ ನಾಪತ್ತೆಯಾಗಿದ್ದ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಬೆಚ್ಚಿ ಬೀಳಿಸುವ ಸಂಗತಿ ಹೊರಬಿದ್ದಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಊರಿನಿಂದ ಊರಿಗೆ ಅಲೆದಾಟ
ಬ್ಯಾಂಕಿನಿoದ ಲಪಟಾಯಿಸಿದ್ದ ಹಣವನ್ನೆಲ್ಲ ಆನ್ ಲೈನ್ ಆಟವಾಡಿ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಆನ್ ಲೈನ್ ಗೇಮ್ ಗಳನ್ನ ಆಡುವ ಚಟಕ್ಕೆ ಬಿದ್ದಿದ್ದು, ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯುವುದು, ಬಳಿಕ ಅದೇ ಹಣದಿಂದ ಗೇಮ್ ಆಡುತ್ತಿದ್ದ. ಹೀಗಾಗಿ ಬ್ಯಾಂಕಿನಿoದ ಲಪಟಾಯಿಸಿದ್ದ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾನೆ, ಕೊನೆಗೆ ಪೊಲೀಸರು ತನ್ನ ಹಿಂದೆ ಬಿದ್ದಿದ್ದಾರೆ ಎಂಬುದನ್ನು ಅರಿತ ಆರೋಪಿ, ಪೊಲೀಸರಿಂದ ತಪ್ಪಿಸಿಕೊಳ್ಳಲು, ಒಂದೇ ಕಡೆ ಇರದೆ, ಸ್ಥಳ ಬದಲಾಯಿಸುತ್ತಲೇ ಇದ್ದ. ಹೀಗೆ ಬೇರೆ ಊರಿಗೆ ತೆರಳಲು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿದ್ದ ವೇಳೆ ಪೊಲೀಸರು ಬಲೆ ಬೀಸಿ, ಬಂಧಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ