Important
Trending

ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಕಾಡುಕೋಣಕ್ಕೆ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ

ಸಿದ್ದಾಪುರ: ಇಲ್ಲಿನ ಅರಣ್ಯಪ್ರದೇಶವೊಂದರಲ್ಲಿ ಗಾಯಗೊಂಡ ಕಾಡುಕೋಣ ನಿತ್ರಾಣ ಸ್ಥಿತಿಯಲ್ಲಿತ್ತು., ತಾಲೂಕಿನ ಹೆಗ್ಗೆಕೊಪ್ಪ ಗ್ರಾಮದ ನೆಲ್ಲಿ ಕೊಪ್ಪ ಮಜರೆಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಿವಮೊಗ್ಗದ ವನ್ಯ ಜೀವಿ ವಿಭಾಗದ ವೈದ್ಯ ಡಾ ಮುರುಳಿ ಮನೋಹರ,, ಡಾ ವಿನಯ್ ರವರು ಸೂಕ್ತ ಚಿಕಿತ್ಸೆ ನೀಡಿ ನಂತರ ಸುರಕ್ಷತೆ ಯೊಂದಿಗೆ ಇಲಾಖೆ ಯ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರು.

ಬೈಕ್ ಸವಾರನ ಮೇಲೆ ಹರಿದ ಜೆಲ್ಲಿ ತುಂಬಿದ ಲಾರಿ: ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಎಲ್ಲಾ ರೀತಿಯ ಮುನ್ನಚ್ಚರಿಕಾ ಕ್ರಮಕೈಗೊಂಡು ಚಿಕಿತ್ಸೆ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಕಾರ್ಯಾಚರಣೆ ಯಲ್ಲಿ ಡಾ ಅಜ್ಜಯ್ಯ, ಎ. ಸಿ. ಎಫ್ ಹರೀಶ್, ಪಶು ಇಲಾಖೆಯ ಡಾ ವಿವೇಕ್ ಹೆಗಡೆ,ಮತ್ತು ವಲಯ ಅರಣ್ಯ ಅಧಿಕಾರಿ ಬಸವರಾಜ್ ಸೇರಿದಂತೆ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Related Articles

Back to top button