Important
Trending

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ| ಅಡಿಕೆ ಕಳ್ಳರು ವಶಕ್ಕೆ

ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿ ಕನಕನಹಳ್ಳಿಯಲ್ಲಿ ಮನೆಯೊಂದರ ಅಂಗಳದಲ್ಲಿ ಸಂಗ್ರಹಿಸಿಟ್ಟ ಎರಡು ಅಡಿಕೆ ಮೂಟೆಗಳನ್ನು ಕಳುವು ಮಾಡಿದ ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಬೈಕ್ ಸವಾರನ ಮೇಲೆ ಹರಿದ ಐ.ಆರ್.ಬಿ ವಾಹನ: ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಳವಳ್ಳಿ ಮಳಲಗಾವ್ ನಿವಾಸಿ ಕೃಷ್ಣ ನಾಗಪ್ಪ ಸಿದ್ಧಿ (19) ಮತ್ತು ರವಿಚಂದ್ರ ಅನಂತ ಸಿದ್ಧಿ (19) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಕಳ್ಳತನ ಮಾಡಿದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಚಾಲಿ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಕನಕನಹಳ್ಳಿ ನಿವಾಸಿ ಮಹಾಬಲೇಶ್ವರ ನರಸಿಂಹ ಭಟ್ಟ ಎನ್ನುವವರು ಮಾರಾಟ ಮಾಡುವ ಉದ್ದೇಶದಿಂದ ,ತಮ್ಮ ಮನೆ ಅಂಗಳದಲ್ಲಿ ಅಡಿಕೆ ಮೂಟೆಗಳನ್ನು ರಾಶಿ ಮಾಡಿಟ್ಟಿದ್ದು, ಸೆಪ್ಟೆಂಬರ್ 14 ರ ರಾತ್ರಿ ಯಾರೋ ಕಳ್ಳರು 60 ಕೆ.ಜಿ ತೂಕದ (ಎರಡು) ಅಡಿಕೆ ಚೀಲಗಳನ್ನು ಕಳುವು ಮಾಡಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಗಳ ಪತ್ತೆಗೆ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪಿ.ಎಸ್. ಐಪ್ರವಿಣಕುಮಾರ್ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪಿ ಎಸ್ ಐ ಮಹಾಂತೇಶ ವಾಲ್ಮೀಕಿ, ಸಿಬ್ಬಂದಿಗಳಾದ ಸುಬ್ರಾಯ ಭಟ್ಟ, ಸಚಿನ ನಾಯಕ, ಪರಮೇಶ.ಎಸ್, ಶೇಖರ ಸಿಧ್ಧಿ, ಶ್ರೀಕಾಂತ ಕಟಬರ, ಮಂಜುನಾಥ ಲಕ್ಮಾಪುರ, ಚಾಲಕ ಜಗದೀಶ ನಾಯ್ಕ ಆವರನ್ನೊಳಗೊಂಡತಂಡ ಚುರುಕಿನ ಕಾರ್ಯಾಚರಣೆ ನಡೆಸಿತ್ತು.

ಅಂಕೋಲಾ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button