Important
Trending

ಉಗ್ರಸಂಘಟನೆ ಜೊತೆ ಸಂಪರ್ಕ? ಶಿರಸಿಯಲ್ಲಿ NIA ದಾಳಿ: SDPI ಮುಖಂಡನ ಬಂಧನ

ಬೆಳ್ಳಂಬೆಳಿಗ್ಗೆ ಮನೆ ಸುತ್ತುವರಿದ ಪೊಲೀಸರು

ಶಿರಸಿ: ರಾಷ್ಟ್ರೀಯ ತನಿಖಾ ದಳದವರು ರಾಜ್ಯದ ವಿವಿಧಡೆ ದಾಳಿ ನಡೆಸಿದ್ದು, ಶಿರಸಿ ತಾಲೂಕಿನ ಟಿಪ್ಪು ನಗರದಲ್ಲೂ ದಾಳಿ ನಡೆದಿದೆ. ಬೆಳಗಿನ‌ ಜಾವ ಸುಮಾರು 6 ಗಂಟೆ ವೇಳೆಗೆ ಈ ದಾಳಿ ನಡೆದಿದೆ.

ಬೈಕ್ ಸವಾರನ ಮೇಲೆ ಹರಿದ ಜೆಲ್ಲಿ ತುಂಬಿದ ಲಾರಿ: ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹೌದು ಶಿರಸಿಯ ಸ್ಥಳೀಯ ಪೊಲೀಸರೊಂದಿಗೆ ದಾಳಿ ನಡೆಸಿ, ಓರ್ವ SDPI ಮುಖಂಡನನ್ನು ಬಂಧಿಸಿದ್ದಾರೆ. ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ (45) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಸುಮಾರು ೬ ಗಂಟೆಯ ವೇಳೆಗೆ ಪೊಲೀಸರು ಅಬ್ದುಲ್ ಮನೆಗೆ ದಾಳಿ‌ನಡೆಸಿದ್ದು, ಲ್ಯಾಪ್ ಟಾಪ್, ಎರಡು ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿಯನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಉಗ್ರಸಂಘಟನೆ ಜೊತೆ ಸಂಪರ್ಕ ಹಿನ್ನಲೆ ರಾಜ್ಯಾದ್ಯಂತ SDPI PFI ಸಂಘಟನೆ ಕಚೇರಿಗಳು ಮತ್ತು ಸದಸ್ಯರ ಮೇಲೆ ದಾಳಿ ನಡೆದಿದ್ದು, ಶಿರಸಿಯಲ್ಲೂ ಇದೇ ನಂಟಿನ ಶಂಕೆ ವ್ಯಕ್ತವಾಗಿದೆ.

100ಕ್ಕೂ ಅಧಿಕ ಕಡೆ ದಾಳಿ?

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇಂದ ದೇಶದ 100ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ವಿವಿಧ ಸಂಘಟನೆಗೆ ಸೇರಿದ ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ವಿಸ್ಮಯ ನ್ಯೂಸ್ ಶಿರಸಿ

Back to top button