Focus News
Trending

ಪೊಲೀಸ್ ಠಾಣೆಗೆ ಬಂದ ಹೊಸ ಬ್ಯಾರಿಕೇಡಗಳು, ಕ್ರೆಡಿಟ್ ಎಕ್ಸಿಸ್ ನಿಂದ ಸಾಮಾಜಿಕ ಭದ್ದತಾ ಕಾರ್ಯಕ್ರಮದಡಿ ಕೊಡುಗೆ

ಅಂಕೋಲಾ : ಕ್ರೆಡಿಟ್ ಎಕ್ಸಿಸ್ ಗ್ರಾಮೀಣ ಲಿ.ನ (ಗ್ರಾಮೀಣ ಕೂಟ’ ) ಕುಮಟಾ ಶಾಖೆ ವತಿಯಿಂದ ಅಂಕೋಲಾ ಪೊಲೀಸ್ ಠಾಣೆಗೆ 8 ಬ್ಯಾರಿಕೇಡಗಳನ್ನು ಕೊಡುಗೆಯಾಗಿ ನೀಡಲಾಯಿತು. ಸುಗಮ ಸಂಚಾರ ಮತ್ತು ಭದ್ರತಾ ವ್ಯವಸ್ಥೆಗೆ ಪೋಲೀಸ್ ಇಲಾಟೆಗೆ ಅವಶ್ಯವಾಗಿರುವ ಬ್ಯಾರಿಕೇಡಗಳನ್ನು ಕ್ರೆಡಿಟ್ ಆ್ಯಕ್ಸಸ್( ಗ್ರಾಮೀಣ ಕೂಟ) ದ ಕುಮಟಾ ಶಾಖೆಯ ಏರಿಯಾ ಮ್ಯಾನೇಜರ ಮಹಬೂಬ ಸಾಬ್ ಇವರು ಅಂಕೋಲಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂತೋಷ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಆಟದ ಮೈದಾನದಲ್ಲಿ ನಡೆಯಿತೇ ನವಜಾತ ಶಿಶುವಿನ ಮಾರಾಟ| ಬಡತನವೆಂದು ಲಕ್ಷ – ಲಕ್ಷದ ಡೀಲ್ ಗೆ ಕೈಚಾಚಿದರೂ ನಂತರ ಚುರ್ ಎಂದ ತಾಯಿ ಕರಳು |ಸರ್ಕಾರಿ ಆಸ್ಪತ್ರೆ ನರ್ಸಮ್ಮನ ಮೇಲೂ ಕೇಸು ದಾಖಲು ?

ಈ ಸಂದರ್ಭದಲ್ಲಿ ಗ್ರಾಮೀಣ ಕೂಟದ ಬ್ರಾಂಚ್ ಮ್ಯಾನೇಜರ ಅಕ್ಷಯ, ಸಿಬ್ಬಂದಿ ಶಿವರಾಜ ಮತ್ತು ಪರಶುರಾಮ ಇದ್ದರು. ಪಿ.ಎಸ್.ಐ ಮಹಾಂತೇಶ ವಾಲ್ಮೀಕಿ, ಪ್ರೊ. ಪಿ.ಎಸ್.ಐ ಸುನೀಲ ಮತ್ತು ಆರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕುಮಟಾ ಹಾಗೂ ಮಂಕಿ ಪೊಲೀಸ್ ಠಾಣೆಗಳಿಗೂ ಬ್ಯಾರಿಕೇಡ್ ಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಮಹಬೂಬ್ ಸಾಬ್ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button