ಸಿವಿಎಸ್‌ಕೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆಆಯ್ಕೆ

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್ನಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಸುಗಮ ನಾಯಕ್ 100ಮೀ. ಓಟದಲ್ಲಿ ಪ್ರಥಮ, ಧೀರಜ್ ನಾಯ್ಕ 400 ಮೀ. ಓಟ ಹಾಗೂ ಹರ್ಡಲ್ಸ್ ನಲ್ಲಿ ಪ್ರಥಮ, ಚgಣ ಮೇಸ್ತ ಟ್ರಿಪಲ್‌ಜಂಪ್‌ನಲ್ಲಿ ದ್ವಿತೀಯ, ಪ್ರಣವಕಡೂರುಚೆಸ್‌ನಲ್ಲಿ ಪ್ರಥಮ ಸ್ಥಾನ ಪಡೆದುಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿದ್ದಾರೆ.

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಹೊಡೆದ ಕಾರು: ಚಾಲಕ ಸ್ಥಳದಲ್ಲೇ ಸಾವು: ಮೂವರಿಗೆ ಗಾಯ

ಬಾಲಕಿಯರ ವಿಭಾಗದಲ್ಲಿಗೌತಮಿ ಹೆಗಡೆ 400 ಮೀ., ಅಪೇಕ್ಷಾ ನಾಯಕ್ 800 ಮೀ. ಓಟದಲ್ಲಿ ಪ್ರಥಮ, ಪ್ರಣವ್ಯಕಡೂರುಚೆಸ್‌ನಲ್ಲಿ ಪ್ರಥಮ, ಮಾನ್ಯಶೇಟ್ ಹಾಗೂ ಇಂಚರಾ ಭಂಡಾರಿಯೋಗದಲ್ಲಿ ಪ್ರಥಮ ಸ್ಥಾನ ಪಡೆದುಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿದ್ದಾರೆ. ಕುಮಾರ ಸಮರ್ಥ ನಾಯ್ಕ 200 ಮೀ. ಓಟದಲ್ಲಿ ಪ್ರಥಮ, 100 ಮೀ. ಓಟದಲ್ಲಿ ದ್ವೀತಿಯ ಹಾಗೂ ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕರ ವಿಭಾಗದಲ್ಲಿ ವೈಯಕ್ತಿಕ ವೀರಾಗ್ರಣಿ ಪದಕವನ್ನು ಗಳಿಸಿಕೊಂಡಿದ್ದಾನೆ.

ಕುಮಾರಿಯೋಗಿತಾ ನಾಯ್ಕ 100 ಮೀ ಓಟದಲ್ಲಿ ಪ್ರಥಮ, 200 ಮೀ ಓಟದಲ್ಲಿ ಪ್ರಥಮ ಹಾಗೂ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ವೀರಾಗ್ರಣಿ ಪದಕವನ್ನು ಗಳಿಸಿಕೊಂಡಿದ್ದಾಳೆ. ಗುoಪು ಆಟಗಳಲ್ಲಿ ಬಾಲಕಿಯರ ವಿಭಾಗದಲ್ಲಿ 4*100 ಮೀ. ರಿಲೇ, ವಾಲಿಬಾಲ್, ಬ್ಯಾಡ್ಮಿಂಟನ್, ಹಾಗೂ ಟೇಬಲ್ ಟೆನಿಸ್ ಆಟಗಳಲ್ಲಿ ಪ್ರಥಮ ಸ್ಥಾನ ಪಡೆದುಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದುಜಿಲ್ಲಾಮಟ್ಟಕ್ಕೆಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಈ ಸಾಧನೆಯಿಂದಸಿವಿಎಸ್‌ಕೆ ಶಾಲೆಯುಕುಮಟಾತಾಲೂಕಿನ ಸಮಗ್ರ ವೀರಾಗ್ರಣಿಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಾಲಾ ವಿದ್ಯಾರ್ಥಿಗಳ ಈ ಸಾಧನೆಗೆಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯೋಧ್ಯಾಪಕರು, ಶಿಕ್ಷಕ ವರ್ಗ ಹಾಗೂ ಪಾಲಕರು ಆಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕಶಿಕ್ಷಕರಾದ ಜಯರಾಜಶೇರುಗಾರ ಹಾಗೂ ನಾಗರಾಜ ಭಂಡಾರಿ ಮಾರ್ಗದರ್ಶನ ನೀಡಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Exit mobile version