Join Our

WhatsApp Group
Important
Trending

ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ: ಒಂಬತ್ತುದಿನಗಳ ಕಾಲ ವಿಶೇಷ ಅಲಂಕಾರ ಸೇವೆ

 ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಶರನ್ನವರಾತ್ರಿ ಉತ್ಸವ

ಕುಮಟಾ ತಾಲೂಕಿನ ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಮಹಾಸತಿ ಭೈರವಿ ದೇವಾಲಯದಲ್ಲಿ  ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಶರನ್ನವರಾತ್ರಿ ಉತ್ಸವ ಅತ್ಯಂತ ವಿಜೃಂಭಣೆಯಿoದ ನಡೆಯಲಿದೆ. ನವರಾತ್ರಿಯ ಒಂಬತ್ತುದಿನಗಳ ಕಾಲ ಮಹಾಸತಿ ಭೈರವಿ ದೇವಿಗೆ ವಿಶೇಷ ಅಲಂಕಾರ ಸೇವೆಗಳು ನಡೆಯಲಿವೆ. ಅರಿಶಿನ ಅಲಂಕಾರ, ಭಸ್ಮ ಅಲಂಕಾರ, ಮುತ್ತಿನ ಅಲಂಕಾರ, ವೀಳ್ಳದೆಲೆ ಅಲಂಕಾರ ಹೀಗೆ ವಿವಿಧ ಸೇವೆಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ, ದೇವಿ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button