Follow Us On

WhatsApp Group
Big NewsImportant
Trending

ಕುಮಟಾದಲ್ಲಿ ಖಾದಿ ಉತ್ಸವ: 29 ರಿಂದ ಅಕ್ಟೋಬರ್ 2ರ ವರೆಗೆ ಕುಮಟಾದ ಬಿ.ಜೆ.ಪಿ ಕಾರ್ಯಾಲಯದಲ್ಲಿ ಆಯೋಜನೆ

ಖಾದಿ ಉತ್ಸವದಲ್ಲಿ ಏನೆಲ್ಲಾ ಇರಲಿದೆ ನೋಡಿ?

ಕುಮಟಾ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿಯು ಸಪ್ಟೆಂಬರ್ 17 ರಿಂದ ಅಕ್ಟೋಬರ್ 2 ವರೆಗೆ ಸೇವಾ ಪಾಕ್ಷಿಕ ಎಂಬ ಅಭಿಯಾನವನ್ನು ನಡೆಸಲು ನಿರ್ಧರಿಸಿ ಈ ಅಭಿಯಾನದಡಿಯಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಂತೆಯೇ ಇದೇ ಸಪ್ಟೆಂಬರ್ 29 ರಿಂದ ಅಕ್ಟೋಬರ್ 2ರ ವರೆಗೆ ಕುಮಟಾದ ಬಿ.ಜೆ.ಪಿ ಕಾರ್ಯಾಲಯದಲ್ಲಿ ಖಾದಿ ಉತ್ಸವವನ್ನು ಆಯೋಜಿಸಲಾಗಿದ್ದು, ಈ ಕುರಿತಾಗಿ ಮಾಹಿತಿ ನೀಡಲು ಇಂದು ಪಟ್ಟಣದ ಬಿ.ಜೆ.ಪಿ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ

ಸುದ್ಧಿಗೋಷ್ಠಿಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡಿ, ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 72 ನೇ ಜನ್ಮದಿನವನ್ನು ವಿಶೇಷವಾಗಿ ಇಡಿ ದೇಶಾದ್ಯಂತ ಆಚರಿಸಲಾಗಿದೆ. ಅಂತೇಯೇ ಕುಮಟಾದಲ್ಲಿಯೂ ಕೂಡ ಸ್ವಚ್ಚತಾ ಕಾರ್ಯಕ್ರಮ, ರಕ್ತದಾನ ಶಿಬಿರ, ವನಮಹೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸುತ್ತಿದ್ದೇವೆ.

ಖಾದಿ ಉತ್ಸವದಲ್ಲಿ ಏನೆಲ್ಲಾ ಇರಲಿದೆ ನೋಡಿ?

ಸೇವಾ ಪಾಕ್ಷಿಕ ಕಾರ್ಯಕ್ರಮದಡಿಯಲ್ಲಿ ಅಕ್ಟೋಬರ್ 2ರ ಗಾಂಧಿ ದಿನಾಚರಣೆಯ ವಿಶೇಷವಾಗಿ ಕುಮಟಾದಲ್ಲೀ ಖಾದಿ ಉತ್ಸವವನ್ನು ನಡೆಸಲು ನಿರ್ಧರಿಸಲಾಗಿದ್ದು, ಈ ಮೂಲಕ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಖಾದಿ ಬಟ್ಟೆಯನ್ನು ಒದಗಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಸಪ್ಟೆಂಬರ್ 29 ರಿಂದ ಅಕ್ಟೋಬರ್ 2ರ ವರೆಗೆ ಬಿ.ಜೆ.ಪಿ ಕಾರ್ಯಲಯದಲ್ಲಿ ಈ ಒಂದು ಖಾದಿ ಉತ್ಸವ ನಡೆಯಲಿದ್ದು, ಸಾರ್ವಜನಿಕರು ಈ ಒಂದು ಖಾದಿ ಮೇಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೆಕೇಂದು ತಿಳಿಸಿದರು.

ಈ ಒಂದು ಖಾದಿ ಮೇಳದಲ್ಲಿ ಎಲ್ಲಾ ಎಲ್ಲಾ ರೀತಿಯ ಖಾದಿ ವಸ್ತುಗಳು, ದೇಶೀಯ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳು ಇರಲಿವೆ. ಈ ವೇಳೆ ಸೇವಾ ಪಾಕ್ಷಿಕ ಅಭಿಯಾನದ ಸಹ ಸಂಚಾಲಕರು ಹಾಗೂ ಬಿ.ಜೆ.ಪಿ ಮುಖಂಡರಾದ ಗಜಾನನ ಗುನಗಾ ಅವರು ಮಾತನಾಡಿ, ಖಾದಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಸಹಕರಿಸಬೇಕೆಂದು ವಿನಂತಿಸಿಕೊoಡರು.

ಈ ಸಂದರ್ಬದಲ್ಲಿ ಕುಮಟಾ ಬಿ.ಜೆ.ಪಿ ಮಂಡಲಾಧ್ಯಕ್ಷರಾದ ಹೇಮಂತ್ ಗಾಂವಕರ್, ಸೇವಾ ಪಾಕ್ಷಿಕ ಅಭಿಯಾನದ ಸಂಚಾಲಕರಾದ ಅಶೋಕ ಪ್ರಭು, ಯುವಾ ಮೋರ್ಚಾ ಪ್ರಭಾರಿಗಳಾದ ಎಮ್.ಜಿ ಭಟ್, ಹಿರಿಯರಾದ ವಿನೋದ ಪ್ರಭು, ಪ್ರಮುಖರಾದ ವಿನಾಯಕ ನಾಯ್ಕ, ದಿವಾಕರ ನಾಯ್ಕ, ವಿಶ್ವನಾಥ ನಾಯ್ಕ, ಜಗದೀಶ ಭಟ್, ಮೋಹಿನಿ ಗೌಡ, ಪಲ್ಲವಿ ಮಡಿವಾಳ, ಸಂತೋಷ ಹೆಗಡೆ, ಅಣ್ಣಪ್ಪ ನಾಯ್ಕ ಮುಂತಾದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button