ಪತ್ನಿಗೆ ಕೇಂದ್ರಸರ್ಕಾರದ ಉದ್ಯೋಗ ಕೊಡಿಸುವುದಾಗಿ ನಂಬಿಸಿ 14.5 ಲಕ್ಷ ರೂಪಾಯಿ ಪಡೆದು ವ್ಯಕ್ತಿಗೆ ಮೋಸ: ಆಗಿದ್ದೇನು ನೋಡಿ?
ಅಂಕೋಲಾ: ಕೇಂದ್ರ ಸರ್ಕಾರದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 14.5 ಲಕ್ಷ ರೂಪಾಯಿ ಪಡೆದು ವಂಚಿಸಿದ ವಂಚಕರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂಬೈ ನಿವಾಸಿಗಳಾದ ಗೌರೀಶ ಸಂತೋಷ ಬಾಂದೇಕರ ಮತ್ತು ಪ್ರೇಮಕುಮಾರ ಸೋಲಂಕಿ ಹಣ ಪಡೆದು ವಂಚಿಸಿದ ಆರೋಪಿಗಳಾಗಿದ್ದು ಇವರು ಅಂಕೋಲಾ ಕಾಕರಮಠ ವಿಠೋಬ ದೇವಾಲಯದ ಸಮೀಪದ ನಿವಾಸಿ ವಿಶಾಲ ವಿ. ನಾರ್ವೇಕರ್ ಎನ್ನುವವರಿಂದ ಅವರ ಪತ್ನಿಗೆ ಕೇಂದ್ರ ಸರ್ಕಾರದ ಉದ್ಯೋಗ ಕೊಡಿಸುವುದಾಗಿ ಹಣ ಪಡೆದಿರುವುದಾಗಿ ತಿಳಿದು ಬಂದಿದೆ.
36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ
ಇವರ ಮಾತು ನಂಬಿದ ವಿಶಾಲ ಅವರು 2019 ರ ನವೆಂಬರ್ 8 ರಿಂದ 2020 ರ ಜುಲೈ 6 ರ ವರೆಗೆ ಹಂತ ಹಂತವಾಗಿ ಗೌರೀಶ ಬಾಂದೇಕರ ಅವರ ಆಕ್ಸಿಸ್ ಬ್ಯಾಂಕ್ ಖಾತೆಗೆ 9.5 ಲಕ್ಷ ಮತ್ತು ಪ್ರೇಮಕುಮಾರ ಸೋಲಂಕಿಯ ಕೋಟೆಕ್ ಮಹೇಂದ್ರ ಬ್ಯಾಂಕ್ ಖಾತೆಗೆ 5 ಲಕ್ಷ ರೂಪಾಯಿ ಜಮಾ ಮಾಡಿರುವುದಾಗಿ ತಿಳಿದು ಬಂದಿದೆ. ಮನೆಯವರ ಬಂಗಾರ ಅಡವಿಟ್ಟು, ಹಣಕಾಸು ಸಂಸ್ಥೆಗಳು ಹಾಗೂ ಆಪ್ತರಿಂದ ಸಾಲ ಪಡೆದು ಪತ್ನಿಗೆ ಉದ್ಯೋಗ ದೊರೆಯುತ್ತದೆಂಬ ಆಸೆಯಿಂದ ನಾರ್ವೇಕರ ಹಣ ನೀಡಿದ್ದರು ಎನ್ನಲಾಗಿದೆ.
ಅವಾಚ್ಯ ಶಬ್ದಗಳಿಂದ ಬಯ್ದು ಜೀವ ಬೆದರಿಕೆ ?
ಹಣ ಪಡೆದ ಆರೋಪಿಗಳು ಉದ್ಯೋಗ ಕೊಡಿಸದೇ,ಹಣವನ್ನು ಮರಳಿ ನೀಡದೇ ಇರುವ ಕುರಿತು ವಿಚಾರಿಸಿದಾಗ ನಾರ್ವೇಕರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬಯ್ದು ಜೀವ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಈ ಕುರಿತು ವಿಶಾಲ ನಾರ್ವೇಕರ ಅವರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ