ಅಂಕೋಲಾ: ಮೊಬೈಲ್ ನೆಟವರ್ಕ್ ಕಂಪನಿಗಳ ಹೆಸರಿನಲ್ಲಿ ಕರೆ ಮಾಡಿ 4ಜಿ ಸೇವೆಯಿಂದ 5 ಜಿ ಸೇವೆಗೆ ಬದಲಾವಣೆ ಮಾಡಿ ಕೊಡುವುದಾಗಿ ಹೇಳಿ ಓ.ಟಿ.ಪಿ ನೀಡುವಂತೆ ಯಾರಾದರೂ ಕೇಳಿದರೆ ಯಾವುದೇ ಕಾರಣಕ್ಕೂ ಯಾರಿಗೂ ಓ.ಟಿ.ಪಿ ನೀಡದಂತೆ ಅಂಕೋಲಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟಿಗೆ ತರಲು ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಮಹಿಳೆ ಶವಕೊಳೆತ ಸ್ಥಿತಿಯಲ್ಲಿ ಪತ್ತೆ
ದೇಶದಲ್ಲಿ ಇತ್ತೀಚೆಗೆ 5ಜಿ ಸೇವೆ ಆರಂಭವಾಗಿದ್ದು ಕೆಲವರು ಮೊಬೈಲ್ ನೆಟವರ್ಕ್ ಕಂಪನಿಗಳ ಹೆಸರಿನಲ್ಲಿ ಗ್ರಾಹಕರ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ 4 ಜಿಯಿಂದ 5 ಜಿ ಸೇವೆಗೆ ಪರಿವರ್ತನೆ ಮಾಡಿಕೊಡುತ್ತೇವೆ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಓ.ಟಿ.ಪಿ ತಿಳಿಸುವಂತೆ ಅಥವಾ ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸುತ್ತಾರೆ ಅವರ ಮಾತನ್ನು ನಂಬಿ ಓ.ಟಿ.ಪಿ ತಿಳಿಸಿದರೆ ಅಥವಾ ಲಿಂಕ್ ತೆರೆದರೆ ಗ್ರಾಹಕರ ಖಾತೆಯ ಹಣ ದೋಚುವ ಸಾಧ್ಯತೆ ಇದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ನಾನಾ ಕಾರಣಗಳಿಂದ ಹೆಚ್ಚುತ್ತಿರುವ ಸೈಬರ್ ಕೈಮ್ ನಿಂದ ಮೋಸ ಹೋಗದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು, ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲವೇ ಸಹಾಯಕ್ಕಾಗಿ ಅಂಕೋಲಾ ಪೋಲೀಸ್ ಠಾಣೆ ಅಥವಾ ತಮ್ಮ ಹತ್ತಿರದ ಪೋಲೀಸ್ ಠಾಣೆ ಸಂಪರ್ಕಿಸಲು ಕೋರಿಕೊಳ್ಳಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ