Important
Trending

ಅಕ್ರಮವಾಗಿ ಮದ್ಯಸಾಗಿಸುತ್ತಿದ್ದ ಕಾರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಕಾರನಲ್ಲಿ ತಂದು ಅಕ್ರಮವಾಗಿ ಮದ್ಯಮಾರಾಟ ಮಾಡುವ ಅಂಗಡಿಗಳಿಗೆ ಪೂರೈಕೆ

ಕುಮಟಾ: ಕಾರಿನಲ್ಲಿ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಸಾಗಿಸುತ್ತಿದ್ದವರನ್ನು ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಸ್ಥಳೀಯ ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ರಾತ್ರಿ ನಡೆದಿದೆ. ತಾಲೂಕಿನ ಬರ್ಗಿಯ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಮದ್ಯ ತುಂಬಿದ ಕಾರು ಕೆಟ್ಟು ನಿಂತಿದ್ದು, ಈ ವೇಳೆ ಕಾರನಲ್ಲಿ ಮದ್ಯ ಇರುವುದನ್ನ ಗಮನಿಸಿದ ಬರ್ಗಿಯ ಯುವಕರು ಕಾರ್ ಹಿಡಿದಿಟ್ಟುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Indian Railway Recruitment 2022: 3,115 ಹುದ್ದೆಗಳಿಗೆ ಅರ್ಜಿ ಆಹ್ವಾನ: SSLC ಪಾಸಾದವರು ಅರ್ಜಿ ಸಲ್ಲಿಸಬಹುದು

ಬಳಿಕ ಸ್ಥಳಕ್ಕೆ ಆಗಮಿಸಿದ ಗೋಕರ್ಣ ಪೊಲೀಸರು ಯುವಕರು ಹಿಡಿದಿಟ್ಟಿದ್ದ ಕಾರನ್ನು ಪರಿಶೀಲನೆ ನಡೆಸಿರುವ ಸಮಯದಲ್ಲಿ ಕಾರ ಒಳಗೆ ವಿವಿಧ ಬ್ರ‍್ಯಾಂಡ್‌ನ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಇರುವುದು ಪತ್ತೆಯಾಗಿದೆ. ಈ ಮದ್ಯವನ್ನ ಸ್ಥಳೀಯ ಬಾರ್ ಒಂದರಿoದ ಕಾರನಲ್ಲಿ ತಂದು ಅಕ್ರಮವಾಗಿ ಮದ್ಯಮಾರಾಟ ಮಾಡುವ ಅಂಗಡಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಎನ್ನಲಾಗುತ್ತದೆ.

ಸ್ಥಳಕ್ಕೆ ಆಗಮಿಸಿದ ಗೋಕರ್ಣ ಪೊಲೀಸರು ಕಾರ ಹಾಗೂ ಲಕ್ಷಾಂತರ ರೂಪಾಯಿ ಮದ್ಯ ಹಾಗೂಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಯಾವ ಯಾವ ಅಂಗಡಿಗಳಿಗೆ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎನ್ನುವ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button